ಬೆಂಗಳೂರು: ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಖಾಲಿ ಇರುವ 399 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡುವಂತೆ ಕೋರಿ ಆರ್ಥಿಕ ಇಲಾಖೆಗೆ ಕರ್ನಾಟಕ ಲೋಕಸೇವಾ ಆಯೋಗವು(KPSC) ಪ್ರಸ್ತಾವನೆ ಸಲ್ಲಿಸಿದೆ.
ಇಲಾಖೆಯಲ್ಲಿರುವ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿರುವ ನಿರೀಕ್ಷಕರು ಮತ್ತು ಲೆಕ್ಕ ಸಹಾಯಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ಕೋರಲಾಗಿದೆ.
ಅನುಮೋದನೆ 2024ರ ಮಾರ್ಚ್ 31ರ ವೇಳೆಗೆ ಇಲಾಖೆಯಲ್ಲಿನ ನಿವೃತ್ತಿ, ನಿಧನ, ಸ್ವಯಂನಿವೃತ್ತಿ ಸೇರಿ ವಿವಿಧ ವೃಂದಗಳ 976 ಹುದ್ದೆಗಳು ಖಾಲಿ ಇವೆ. ಒಟ್ಟಾರೆ ಇಲಾಖೆಯಲ್ಲಿನ ಶೇ.97 ಹುದ್ದೆಗಳ ಖಾಲಿ ಇವೆ ಎನ್ನಲಾಗಿದೆ.
ಇಲಾಖೆಯ ಕರ್ತವ್ಯ ಮತ್ತು ಹೊಣೆಗಾರಿಕೆ ನಿರ್ವಹಿಸಲು ಮೂಲ ವೃಂದದಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಯನ್ನು ನೇರ ನೇಮಕಾತಿ ಮತ್ತು ಪದೋನ್ನತಿಯಿಂದ ನೇಮಕ ಮಾಡಬೇಕಿದೆ. ಪ್ರಸ್ತುತ 9 ಸಹಾಯಕ ನಿರ್ದೇಶಕರ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಕೆಪಿಎಸ್ಸಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.