alex Certify KPSC ಸದಸ್ಯತ್ವ ಕೊಡಿಸುವುದಾಗಿ ಸಿಎಂ, ರಾಜ್ಯಪಾಲರ ನಕಲಿ ಸಹಿ ಬಳಸಿ 4 ಕೋಟಿ ವಂಚನೆ; ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KPSC ಸದಸ್ಯತ್ವ ಕೊಡಿಸುವುದಾಗಿ ಸಿಎಂ, ರಾಜ್ಯಪಾಲರ ನಕಲಿ ಸಹಿ ಬಳಸಿ 4 ಕೋಟಿ ವಂಚನೆ; ಆರೋಪಿಗಳು ಅರೆಸ್ಟ್

ಬೆಂಗಳೂರು: ಕೆ.ಪಿ.ಎಸ್.ಸಿ (ಕರ್ನಾಟಕ ಲೋಕಸೇವಾ ಆಯೋಗ) ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 4 ಕೋಟಿ ವಂಚಿಸಿದ್ದ ಗ್ಯಾಂಗ್ ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆ.ಪಿ.ಎಸ್.ಸಿ ಸದಸ್ಯತ್ವ ಕೊಡಿಸುವುದಾಗಿ ಹೇಳಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಕಲಿ ಲೆಟರ್ ಹೆಡ್, ನಕಲಿ ಸಹಿ ಬಳಸಿ 4 ಕೋಟಿ ರೂಪಾಯಿ ವಂಚಿಸಿದ್ದರು. ಈ ಬಗ್ಗೆ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ರಿಯಾಜ್ ಅಹ್ಮದ್, ಯೂಸುಫ್, ಚದ್ರಪ್ಪ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಕೊಡಿಸುತ್ತೇವೆ ಎಂದು ಈ ಗ್ಯಾಂಗ್ ಮಹಿಳೆಯೊಬ್ಬರಿಗೆ ವಂಚಿಸಿದೆ. 5 ಕೋಟಿ ಬೇಡಿಕೆ ಇತ್ಟಿದ್ದ ಗ್ಯಾಂಗ್ ಬಳಿಕ 4.10ಕೋಟಿ ಹಣ ಪಡೆದಿದೆ. ಆರೋಪಿಗಳ ಚಲನವಲನಗಳ ಬಗ್ಗೆ ಅನುಮಾನಗೊಂಡ ಮಹಿಳೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...