ಬೆಂಗಳೂರು: 2025ರ ಮಾರ್ಚ್ ಕೊನೆ ವಾರ 384 ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ಮುಖ್ಯ ಪರೀಕ್ಷೆ ನಡೆಸಲು ಕರ್ನಾಟಕ ಲೋಕಾಸೇವಾ ಆಯೋಗ(KPSC) ಉದ್ದೇಶಿಸಿದೆ.
ಕೆಎಎಸ್ ಮುಖ್ಯ ಪರೀಕ್ಷೆ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ತಾತ್ಕಾಲಿಕ ದಿನಾಂಕಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಮಂಗಳವಾರ ಬಿಡುಗಡೆ ಮಾಡಿದ್ದು, ಮಾರ್ಚ್ 28, 29, ಏಪ್ರಿಲ್ 1 ಮತ್ತು 2 ರಂದು ಮುಖ್ಯ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.
ಲೆಕ್ಕಪತ್ರ ಇಲಾಖೆಯ 15 ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ನೇಮಕಾತಿಗೆ ಜನವರಿ 21 ಮತ್ತು 27ರಂದು ಪರೀಕ್ಷೆ ನಡೆಯಲಿದೆ.
ಹಿಂದುಳಿದ ವರ್ಗ ಕಲ್ಯಾಣ ಅಧಿಕಾರಿಗಳ 21 ಹುದ್ದೆಗಳಿಗೆ ಜನವರಿ 25ರಂದು ಪರೀಕ್ಷೆ ನಡೆಸಲಾಗುವುದು.
ಬಿಬಿಎಂಪಿ ಸಹಾಯಕ ಇಂಜಿನಿಯರ್ 95 ಹುದ್ದೆಗಳಿಗೆ ಜನವರಿ 31ರಂದು ಪರೀಕ್ಷೆ ನಡೆಯಲಿದೆ.
ಜಲಸಂಪನ್ಮೂಲ ಇಲಾಖೆಯ 90 ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಫೆಬ್ರವರಿ 16ರಂದು ಪರೀಕ್ಷೆ ನಡೆಸಲಾಗುವುದು.