ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(KPSC) ವತಿಯಿಂದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಗ್ರೂಪ್ ಸಿ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಕಲ್ಯಾಣ ಕರ್ನಾಟಕ ಭಾಗದವರಿಗೆ 281 ಹುದ್ದೆಗಳಿವೆ. ಉಳಿಕೆ ಮೂಲ ವೃಂದಕ್ಕೆ 129 ಹುದ್ದೆಗಳು ಸೇರಿ 410 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.
ಕಿರಿಯ ಅಭಿಯಂತರ(ಸಿವಿಲ್) 89, ಹಿರಿಯ ಆರೋಗ್ಯ ನಿರೀಕ್ಷಕ 57, ನೀರು ಸರಬರಾಜು ಆಪರೇಟರ್ 89, ಸಹಾಯಕ ನೀರು ಸರಬರಾಜು ಆಪರೇಟರ್ 163, ಎಲೆಕ್ಟ್ರಿಷಿಯನ್ 12 ಹುದ್ದೆಗಳಿವೆ.
ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ, ಸ್ಯಾನಿಟರಿ ಹೆಲ್ತ್ ಇನ್ಸ್ಪೆಕ್ಟರ್ ಡಿಪ್ಲೋಮಾ, ಎಸ್ಎಸ್ಎಲ್ಸಿ ಜೊತೆಗೆ ಎಲೆಕ್ಟ್ರಿಕಲ್, ಫಿಟ್ಟರ್ ನಲ್ಲಿ ಐಟಿಐ ಓದಿದವರು ಅರ್ಜಿ ಸಲ್ಲಿಸಬಹುದು. ಮಾರ್ಚ್ 31 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್ 29 ಕೊನೆಯ ದಿನವಾಗಿರುತ್ತದೆ. ಮಾಹಿತಿಗಾಗಿ kpsc.kar.nic.in ಗಮನಿಸಬಹುದಾಗಿದೆ.