ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎರಡು ಸಾವಿರ ಹುದ್ದೆಗಳ ನೇಮಕಾತಿಗೆ ಇಲಾಖೆಗಳಿಂದ ಬಂದಿರುವ ಬಾಕಿ ಇರುವ ಪ್ರಸ್ತಾವನೆ ವಿವರಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ.
ಪಶುವೈದ್ಯಾಧಿಕಾರಿಗಳು 400 ಹುದ್ದೆ, ಕೃಷಿ ಸಹಾಯಕ ಅಧಿಕಾರಿಗಳ 300 ಹುದ್ದೆ, ಶಿಕ್ಷಣ ಇಲಾಖೆಯಲ್ಲಿ 140 ಮುಖ್ಯ ಶಿಕ್ಷಕರ ಹುದ್ದೆ, ಜಲ ಸಂಪನ್ಮೂಲ ಇಲಾಖೆಯಲ್ಲಿ 100 ಸಹಾಯಕ ಇಂಜಿನಿಯರ್ ಹುದ್ದೆ, ಬಿಬಿಎಂಪಿಯಲ್ಲಿ 100 ಸಹಾಯಕ ಇಂಜಿನಿಯರ್ ಹುದ್ದೆ, ಸಾರಿಗೆ ಇಲಾಖೆಯಲ್ಲಿ 76 ಮೋಟಾರ್ ವಾಹನ ನಿರೀಕ್ಷಕರ ಹುದ್ದೆ, ಜಲಸಂಪನ್ಮೂಲ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಗಳ 300 ಹುದ್ದೆ, ಗೆಜೆಟೆಡ್ ಪ್ರೊಬೇಷನರಿ 40 ಹುದ್ದೆಗಳು, ವಿವಿಧ ಇಲಾಖೆಗಳಲ್ಲಿ ಎಪ್.ಡಿ.ಎ., ಎಸ್‌ಡಿಎ, ಶೀಘ್ರ ಲಿಪಿಕಾರ ಸುಮಾರು 2000 ಹುದ್ದೆಗಳ ಪ್ರಸ್ತಾವನೆಗಳ ವಿವರಗಳನ್ನು ಕೆಪಿಎಸ್ಸಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು ಪ್ರಸ್ತಾವನೆಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಕೆ.ಪಿ.ಎಸ್.ಸಿ. ಕಾರ್ಯದರ್ಶಿ ಲತಾ ಕುಮಾರಿ ತಿಳಿಸಿದ್ದಾರೆ.