ಬೆಂಗಳೂರು: ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಲ್ಲಿ 188 ಸಹಾಯಕ ಇಂಜಿನಿಯರ್ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಹೈದರಾಬಾದ್ ಕರ್ನಾಟಕದ 59 ಹುದ್ದೆಗಳು ಸೇರಿದಂತೆ 188 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ.
ಸಿವಿಲ್ ಇಂಜಿನಿಯರಿಂಗ್ ಅಥವಾ ಎನ್ವಿರಾನ್ಮೆಂಟಲ್ ವಿಷಯದಲ್ಲಿ ಬಿಎ ಅಥವಾ ಬಿಟೆಕ್ ಪದವಿ ಪಡೆದ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿಯವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಫೆಬ್ರವರಿ 28 ರಿಂದ ಮಾರ್ಚ್ 30ರವರೆಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ https://bit.ly/3BvqH8 ವೆಬ್ ಸೈಟ್ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.