![ಜೈಲರ್, ಭೋಳಾ ಶಂಕರ್ ಗಾಗಿ, ಕನ್ನಡದ ಕೌಸಲ್ಯ ಸುಪ್ರಜಾ ರಾಮಾ ಚಿತ್ರದ ಎತ್ತಂಗಡಿ, ಚಿತ್ರತಂಡದಿಂದ ಪ್ರತಿಭಟನೆ- Kannada Prabha](https://media.kannadaprabha.com/uploads/user/imagelibrary/2023/8/7/w900X450/Kousalya-Supraja-Rama.jpg?w=400&dpr=2.6)
ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೌಂಡ್ ಮಾಡುತ್ತಿರುವ ಸಿನಿಮಾ ಎಂದರೆ ಡಾರ್ಲಿಂಗ್ ಕೃಷ್ಣ ನಟನೆಯ ‘ಕೌಶಲ್ಯ ಸುಪ್ರಜಾ ರಾಮ’, ಪ್ರೇಕ್ಷಕರ ಗಮನ ಸೆಳೆದು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಈ ಚಿತ್ರ ಇದೀಗ ರಾಜ್ಯಾದ್ಯಂತ 25 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣವಾದ instagram ನಲ್ಲಿ ಅಪ್ಲೋಡ್ ಮಾಡುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ.
ರೋಮ್ಯಾಂಟಿಕ್ ಡ್ರಾಮಾ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶಶಾಂಕ್ ನಿರ್ದೇಶಿಸಿದ್ದು, ಡಾರ್ಲಿಂಗ್ ಕೃಷ್ಣ ಸೇರಿದಂತೆ ಬೃಂದಾ ಆಚಾರ್ಯ, ಮಿಲನ ನಾಗರಾಜ್, ಸುಧಾ ಬೆಳವಾಡಿ, ನಾಗಭೂಷಣ್, ಅಚ್ಯುತ್ ಕುಮಾರ್, ರಂಗಾಯಣ ರಘು ತೆರೆ ಹಂಚಿಕೊಂಡಿದ್ದಾರೆ. ಕೌರವ ಪ್ರೊಡಕ್ಷನ್ ಹಾಗೂ ಶಶಾಂಕ್ ಸಿನಿಮಾಸ್ ಬ್ಯಾನರ್ ನಡಿ ಬಿ.ಸಿ. ಪಾಟೀಲ್ ಹಾಗೂ ನಿರ್ದೇಶಕ ಶಶಾಂಕ್ ಬಂಡವಾಳ ಹೂಡಿದ್ದಾರೆ.
![](https://kannadadunia.com/wp-content/uploads/2023/08/19175235-6127-474a-a9b7-57e5652ba8de-400x568.jpg)