ಬಳ್ಳಾರಿ: ಐತಿಹಾಸಿಕ ಕೊಟ್ಟೂರು ಗುರಬಸವೇಶ್ವರ ಜಾತ್ರೆ ವೇಳೆ ರಥ ಹೊರ ತೆಗೆಯುವಾಗ ಅವಘಡ ಸಂಭವಿಸಿದೆ. ರಥದ ಸ್ಟೇರಿಂಗ್ ಕಟ್ ಆಗಿ ರಥ ಏಕಾಏಕಿ ನುಗ್ಗಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಗುರಬಸವೇಶ್ವರ ತೇರನು ಹೊರ ತೆಗೆಯುತ್ತಿದ್ದಾಗ ಈ ಘಟನೆ ನಡೆದಿದೆ. ತೇರು ಹೊರತೆಗೆಯುವಾಗ ಜೋರಾಗಿ ಎಳೆಯುತ್ತಿದ್ದಂತೆ ಸ್ಟೇರಿಂಗ್ ಕಟ್ ಆಗಿದ್ದು, ಬೃಹತ್ ಗಾತ್ರದ ತೇರು ರಭಸವಾಗಿ ಮುನ್ನುಗ್ಗಿದೆ. ತಕ್ಷಣ ಸ್ಥಳದಲ್ಲಿದ್ದ ಭಕ್ತರು ಸರಿದುಕೊಂಡಿದ್ದರಿಂದ ಭಾರಿ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ರಥ ಮುನ್ನುಗ್ಗಿದ್ದರಿಂದ ರಸ್ತೆಬದಿ ನಿಲ್ಲಿಸಿದ್ದ ಬೈಕ್, ವಾಹನಗಳು ರಥದ ಗಾಲಿಗಳಿಗೆ ಸಿಲುಕಿ ನುಜ್ಜುಗುಜ್ಜಾಗಿವೆ. ಅದೃಷ್ಟವಶಾತ್ ಭಕ್ತರು ಹಾಗೂ ಸ್ಥಳದಲ್ಲಿದ್ದ ಸಿಬ್ಬಂದಿಗಳು ಪಾರಾಗಿದ್ದಾರೆ.