
ಹಾರ್ಡಿ ಸಂಧುರ ಬಿಜ್ಲೀ ಬಿಜ್ಲೀ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ದಕ್ಷಿಣ ಕೊರಿಯಾದಲ್ಲೂ ಈ ಪಂಜಾಬೀ ಹಾಡು ಜನರನ್ನು ಕುಣಿಸುತ್ತಿದೆ.
ಹಾರ್ಡಿ ಸಂಧು ಜೊತೆಗೆ ಶ್ವೇತಾ ತಿವಾರಿ ಪುತ್ರಿ ಪಾಲಕ್ ಕಾಣಿಸಿಕೊಂಡಿರುವ ಈ ಹಾಡಿನ ನೃತ್ಯದ ಕೊರಿಯೋಗ್ರಾಫಿ ನೆಟ್ಟಿಗರಿಗೆ ಡ್ಯಾನ್ಸ್ ಚಾಲೆಂಜ್‌ಗಳನ್ನು ಸೃಷ್ಟಿಸಿದೆ. ಬಿಡುಗಡೆಯಾಗಿ ವರ್ಷ ಕಳೆದರೂ ಹಾಡಿನ ಕ್ರೇಜ಼್ ಮಾತ್ರ ಹಾಗೇ ಇದೆ.
ಇನ್‌ಸ್ಟಾಗ್ರಾಂನಲ್ಲಿ ಡಾಸಮ್ ಹರ್ ಎಂಬಾಕೆ ಶೇರ್ ಮಾಡಿದ ಈ ಕ್ಲಿಪ್‌ನಲ್ಲಿ, ದಕ್ಷಿಣ ಕೊರಿಯಾದ ಯುವತಿಯರು ಬಿಜ್ಲಿ ಬಿಜ್ಲಿ ಹಾಡಿಗೆ ಸ್ಟಪ್ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಡಾಸಮ್ ಹಾಗೂ ಆಕೆಯ ತಾಯಿ ಮತ್ತಿತ್ತರರು ಹಾಡಿನ ಹುಕ್ ಸ್ಟೆಪ್‌ಗಳಿಗೆ ಹೆಜ್ಜೆ ಹಾಕಿದ್ದಾರೆ.