ಸೌಂದರ್ಯದಲ್ಲಿ ಕೊರಿಯನ್ ರನ್ನು ಮೀರಿಸುವವರಿಲ್ಲ. ಅವರ ಸೌಂದರ್ಯ ಉತ್ಪನ್ನಗಳು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಚಳಿಗಾಲದಲ್ಲಿ ಮಂದ, ಶುಷ್ಕ ಹಾಗೂ ಬಣ್ಣ ರಹಿತವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಕೊರಿಯನ್ನರ ಈ ಸೌಂದರ್ಯ ಟಿಪ್ಸ್ ನ್ನು ಫಾಲೋ ಮಾಡಿ.
*ಗ್ರೀನ್ ಟೀ ಕೊರಿಯನ್ ನವರು ಚರ್ಮದ ರಕ್ಷಣೆಗಾಗಿ ಬಳಸುತ್ತಾರೆ. ಬೆಳಿಗ್ಗೆ ಗ್ರೀನ್ ಟೀಯಿಂದ ಮುಖವನ್ನು ವಾಶ್ ಮಾಡಿಕೊಳ್ಳುತ್ತಾರೆ. ಇದು ಚರ್ಮವನ್ನು ಹೈಡ್ರೇಟ್ ಮಾಡುವುದಲ್ಲದೇ ಉತ್ತಮ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ.
*ಹಾಗೇ ಅವರು ಚಳಿಗಾಲದಲ್ಲಿ ಚರ್ಮ ಒಣಗುವುದನ್ನು ರಕ್ಷಿಸಲು ಫೇಸ್ ಪ್ಯಾಕ್ ನ್ನು ಬಳಸುತ್ತಾರೆ. 1 ಚಮಚ ಅಕ್ಕಿಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅಲೋವೆರಾ ಜೆಲ್, ಗ್ರೀನ್ ಟೀ ಸೇರಿಸಿ ಮಿಶ್ರಣವನ್ನು ತಯಾರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮುಖವನ್ನು ವಾಶ್ ಮಾಡಿ. ಇದು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ.