ರಾಷ್ಟ್ರಗೀತೆ ಬಗ್ಗೆ ಅಸಡ್ಡೆ ತೋರುವವರು ಒಂದಷ್ಟು ಮಂದಿ ಇದ್ದಾರೆ. ಆದರೆ, ರವೀಂದ್ರ ನಾಥ ಠ್ಯಾಗೋರ್ ಬರೆದ ಗೀತೆ ಎಷ್ಟು ವಿಶ್ವಮಾನ್ಯ, ಆಪ್ಯಾಯಮಾನ ಎಂಬುದನ್ನು ತೋರಿಸುವ ವಿಡಿಯೋ ಒಂದು ವೈರಲ್ ಆಗಿದೆ.
ಕೊರಿಯಾದ ತಾಯಿಯೊಬ್ಬರು ತನ್ಮ ಮಗನಿಗೆ ಭಾರತೀಯ ರಾಷ್ಟ್ರಗೀತೆ ಜನ ಗಣ ಮನವನ್ನು ಹೇಗೆ ಹಾಡಬೇಕೆಂದು ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಿಮ್ ಕೊರಿಯನ್ ಎಂಬಾಕೆಯ ಪತಿ ಭಾರತೀಯ, ಮತ್ತು ಅವರ ಮಗ ಆದಿ ಎರಡೂ ಸಂಸ್ಕೃತಿಗಳ ಬಗ್ಗೆ ಕಲಿಯುತ್ತ ಬೆಳೆಯುತ್ತಿದ್ದಾನೆ. ಇನ್ಸ್ಟಾಗ್ರಾಮ್ ಹ್ಯಾಂಡಲ್ ಪಾಮ್ ಕಿಮ್ ಫಾರೆವರ್ನಲ್ಲಿ ವಿಡಿಯೊವನ್ನು ಅಪ್ಲೋಡ್ ಮಾಡಲಾಗಿದ್ದು, ಅದನ್ನು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹಂಚಿಕೊಳ್ಳಲಾಗಿದೆ. ಈ ವರೆಗೆ ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ತಾಯಿ ಮೊದಲು ಜನಗಣಮನ ಹೇಳಿಕೊಡುವಾಗ ಆತ ನಂತರ ಪುನರಾವರ್ತಿಸುತ್ತಾನೆ, ಇಡೀ ಗೀತೆಯನ್ನು ಹೃದಯಾಂತರಾಳದಿಂದ ಹೇಗೆ ನೆನಪಿಸಿಕೊಂಡು ಹಾಡುವುದು ಅದ್ಭುತವಾಗಿದೆ.
ಹಾಡು ಕಲಿಕೆಯ ಕೊನೆಯಲ್ಲಂತೂ ಆ ಮಗು ಎದ್ದು ನಿಂತು ಜೈ ಹಿಂದ್ ಎಂದು ಸೆಲ್ಯೂಟ್ ಮಾಡುವುದು ಅದ್ಭುತವಾಗಿದೆ. ಮಗುವಿನ ಮುದ್ದುಮುದ್ದಾದ ತೊದಲು ನುಡಿಗಳನ್ನು ಹೇಳುವುದು ಕಂಡು ಖುಷಿಪಡುವ ಜೊತೆಗೆ ತಾಯಿ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುತ್ತಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಕಾಮೆಂಟ್ ಮಳೆಗರೆದಿದ್ದಾರೆ. ಭಾರತದ ಬಗೆಗಿನ ಅಭಿಮಾನವನ್ನು ಕೊಂಡಾಡಿದ್ದಾರೆ.