![](https://kannadadunia.com/wp-content/uploads/2023/06/straydogs-istock-1223680-1685540766.jpg)
ಕೊಪ್ಪಳ: ಇತ್ತೀಚಿನ ದೀನಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೀದಿ ನಾಯಿಗಳ ದಾಳಿಗೆ ಮಕ್ಕಳು, ಹಿರಿಯರು ಸಂಕಷ್ಟ ಅನುಭವಿಸುವಂತಾಗಿದೆ. ಬೀದಿ ನಾಯಿ ದಾಳಿಯಿಂದ ಹಲವರು ಗಂಭೀರವಾಗಿ ಆಸ್ಪತ್ರೆಗೆದಾಖಲಾಗುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಆಡಳಿತ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕದಿರುವುದು ದುರಂತ.
ಕೊಪ್ಪಳ ಜಿಲ್ಲೆಯಲ್ಲಿ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿರುವ ಘಟನೆ ನಡೆದಿದೆ. ಜಿಲ್ಲೆಯ ಕಾರಟಗಿ ತಾಲೂಕಿನ ಹುಳ್ಳಿಹಾಳ ಗ್ರಾಮದಲ್ಲಿ 6 ವರ್ಷದ ಹನುಮೇಶ ಛಲವಾದಿ ಎಂಬ ಬಾಲಕನ ಮೇಲೆ ಬೀದಿನಾಯಿ ದಾಳಿ ನಡೆಸಿದೆ.
ಬಾಲಕನ ಕಿವಿ, ದೇಹದ ಹಲವೆಡೆ ಕಚ್ಚಿ ಗಂಭೀರ ಗಾಯಗೊಳೀಸಿದ್ದು, ಗಾಯಾಳು ಬಾಲಕನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.