
ಕೊಪ್ಪಳ: ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಹಿಡಿದು ಚಪ್ಪಲಿಯಿಂದ ಥಳಿಸಿದ ಘಟನೆ ಕೊಪ್ಪಳ ಜಿಲ್ಲೆಯ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿ ಯಮನೂರ, ಮಹಿಳೆಯಿಂದ ಏಟು ತಿಂದ ವ್ಯಕ್ತಿ. ಗೋದಾವರಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಯಮನೂರಪ್ಪ, ಲೋನ್ ಕೊಡಿಸುವ ನೆಪದಲ್ಲಿ , ಮೈಕ್ರೋ ಫೈನಾನ್ಸ್ ಮಹಿಳಾ ಗುಂಪಿನ ಸದಸ್ಯೆ ನಾಗಮ್ಮ ಎಂಬ ವಿವಾಹಿತ ಮಹಿಳೆ ಮೇಲೆ ಕಣ್ಣಾಕಿದ್ದಾನೆ. ನಾಗಮ್ಮನಿಗೆ ಗುಂಪಿನ ಅನುಸಾರ ಲೋನ್ ಮಂಜೂರಾಗಿತ್ತಂತೆ. ಆದರೆ ಯಮನೂರಪ್ಪ ನಾಗಮ್ಮನಿಗೆ ಲೋನ್ ಕೊಡುವಾಗ ತಕರಾರು ಮಾಡಿದ್ದಾನೆ. ಅಲ್ಲದೇ ಲೋನ್ ಬೇಕೆಂದರೆ ತನ್ನ ಜೊತೆ ಒಂದು ದಿನ ಕಾಲ ಕಳೆಯುವಂತೆ ಹೇಳಿದ್ದಾನೆ.
ಯಮನೂರಪ್ಪ ವರ್ತನೆಗೆ ನಾಗಮ್ಮ ಹಾಗೂ ಆಕೆಯ ತಾಯಿ ಆತನನ್ನು ಹಿಡಿದು ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.