ಕೊಪ್ಪಳ: ಜಾತ್ರೆಯಲ್ಲಿ ಸ್ಟೀಲ್ ಪಾತ್ರೆ ಮಾರಲು ಬಂದಿದ್ದ ದಂಪತಿಯ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಪತಿಯೇ ಪತ್ನಿಯನ್ನು ಇರಿದು ಕೊಂದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ಟೀಲ್ ಪಾತ್ರೆ ಮಾರಲು ಬಂದಿದ್ದ ಪತಿ-ಪತ್ನಿ ನಡುವೆ ಗಲಾಟೆಯಾಗಿ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ಕೊಪ್ಪಳ ನಗರ ಠಾಣೆ ಪೊಲೀಸರು ಇಬ್ಬರಿಗೂ ಜಗಳ ಬಿಡಿಸಿ ಬುದ್ಧಿವಾದ ಹೇಳಿಕಳುಹಿಸಿದ್ದರು. ಹೋಗೆ ಠಾಣೆಯಿಂದ ವಾಪಾಸ್ ಆದ ದಂಪತಿ ಮತ್ತೆ ಜಗಳ ಆರಂಭಿಸಿದ್ದಾರೆ.
ಕೋಪದ ಬರದಲ್ಲಿ ಪತಿ, ಪತ್ನಿಗೆ ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಆರೋಪಿ ಪತಿ ರಾಜೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.