ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಸಮೀಪ ಶನಿವಾರ ರಾತ್ರಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹ ಪತ್ತೆಯಾಗಿದೆ.
ರೇಖಾ ಸಿದ್ದಯ್ಯ ಪೊಲೀಸ್ ಪಾಟೀಲ(40), ಗಿರಿಜಾ ಕಲ್ಲನಗೌಡ ಪೊಲೀಸ್ ಪಾಟೀಲ(28), ಭುವನೇಶ್ವರಿ ಶಾಂತವೀರಯ್ಯ ಪೊಲೀಸ್ ಪಾಟೀಲ(32), ವೀಣಾ ಬಸವರಾಜ ಪೊಲೀಸ್ ಪಾಟೀಲ(22) ಮೃತಪಟ್ಟವರು.
ಹೊಲದಲ್ಲಿ ನಿನ್ನೆ ಕೆಲಸ ಮುಗಿಸಿ ಮನೆಗೆ ತೆರಳುವಾಗ ಸಂಕನೂರು ಬಳಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅವರ ಪತ್ತೆಗಾಗಿ ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದ್ದು, ಮಳೆ ಮತ್ತು ಬೆಳಕಿನ ಕೊರತೆ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.
ಸ್ಥಳೀಯರು ನೆರವಿನೊಂದಿಗೆ ಹುಡುಕಾಟ ಮುಂದುವರೆಸಲಾಗಿದ್ದು, ಭಾನುವಾರ ಮೃತ ದೇಹಗಳು ಪತ್ತೆಯಾಗಿವೆ. ಕುಟುಂಬದವರು, ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.