ವಿಶ್ವದ ಎರಡನೇ ಅತಿ ದೊಡ್ಡ ಮೈಕ್ರೋ ಬ್ಲಾಗಿಂಗ್ ವೇದಿಕೆ ಎಂಬ ಹೆಗ್ಗಳಿಕೆ ಹೊಂದಿರುವ ಭಾರತೀಯ ಮೂಲದ ‘ಕೂ’ ಆಪ್ ಈಗ ಟ್ವಿಟ್ಟರ್ ಗೆ ಸೆಡ್ಡು ಹೊಡೆಯಲು ವೇದಿಕೆ ಸಿದ್ಧಪಡಿಸಿಕೊಂಡಿದೆ. ಎಲ್ಲ ಪ್ರಮುಖ ಗಣ್ಯರಿಗೆ ದೃಢೀಕರಣದ ಮಾನ್ಯತೆಯನ್ನು ಜೀವಿತಾವಧಿವರೆಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಟ್ವಿಟ್ಟರ್ ನ್ನು ಟೆಸ್ಲಾ ಸಿಇಒ ಎಲಾನ್ ಮಸ್ಕ್ ತನ್ನ ತೆಕ್ಕೆಗೆ ತೆಗೆದುಕೊಂಡು ಬಳಿಕ ಅಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ಬ್ಲೂ ಟಿಕ್ ಪಡೆಯಲು ಹಣ ಪಾವತಿಸುವ ಪದ್ಧತಿಯನ್ನು ಜಾರಿಗೊಳಿಸಿದೆ. ಹೀಗಾಗಿ ‘ಕೂ’ ಈಗ ಸಾಧಕರು ಮತ್ತು ಗಣ್ಯರಿಗೆ ಹಳದಿ ಟಿಕ್ ಮಾರ್ಕ್ ಮಾನ್ಯತೆಯನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ.
ವಿಶ್ವದ 100 ದೇಶಗಳಲ್ಲಿ ‘ಕೂ’ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲಾಗಿದ್ದು, 6 ಕೋಟಿ ಬಳಕೆದಾರರಿದ್ದಾರೆ. ಅಲ್ಲದೆ ವಿಶ್ವದ ಎರಡನೇ ದೊಡ್ಡ ಮೈಕ್ರೋ ಬ್ಲಾಗಿಂಗ್ ವೇದಿಕೆ ಎಂಬ ಹೆಗ್ಗಳಿಕೆಯೂ ‘ಕೂ’ ಅಪ್ಲಿಕೇಶನ್ ಗೆ ಇದೆ. ಇದನ್ನು ಮತ್ತಷ್ಟು ಉನ್ನತೀಕರಣಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಮಾಯಾಂಕ್ ಹೇಳಿದ್ದಾರೆ.