alex Certify ಇಲ್ಲಿದೆ ‘ಶಿಳ್ಳೆʼ ಹೊಡೆಯುವ ಗ್ರಾಮ….! ಪ್ರಧಾನಿ ಮೋದಿಗೆ ವಿಶೇಷ ರಾಗ ಅರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ‘ಶಿಳ್ಳೆʼ ಹೊಡೆಯುವ ಗ್ರಾಮ….! ಪ್ರಧಾನಿ ಮೋದಿಗೆ ವಿಶೇಷ ರಾಗ ಅರ್ಪಣೆ

ಕೊಂಗ್‌ಥಾಂಗ್: ಮಹಿಳೆಯೊಬ್ಬರು ಹಾಡಿದ ವಿಶೇಷ ರಾಗವನ್ನು ಒಳಗೊಂಡ ವಿಡಿಯೋವನ್ನು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಗ್ರಾಮವೊಂದು ಮತ್ತೆ ಸುದ್ದಿಯಲ್ಲಿದೆ. ಇದು ಮೇಘಾಲಯದ ಪೂರ್ವ-ಖಾಸಿ ಬೆಟ್ಟಗಳಲ್ಲಿರುವ ಕೊಂಗ್‌ಥಾಂಗ್ ಎಂಬ ಸಣ್ಣ ಹಳ್ಳಿಯಾಗಿದೆ.

ಕೊಂಗ್‌ಥಾಂಗ್ ಗ್ರಾಮವನ್ನು ಪ್ರವಾಸಿ ತಾಣವಾಗಿ ಉತ್ತೇಜಿಸಲು ಕೇಂದ್ರದ ಪ್ರಯತ್ನಗಳನ್ನು ಶ್ಲಾಘಿಸಿದ ಮೇಘಾಲಯ ಸಿಎಂ, ಈ ಗ್ರಾಮದ ಮಹಿಳೆ ಹಾಡಿರುವ ರಾಗವನ್ನು ಪ್ರಸ್ತುತಪಡಿಸಿ ಪ್ರಧಾನಿ ಮೋದಿಗೆ ಸಮರ್ಪಿಸಿದ್ದಾರೆ.

ಈ ವಿಡಿಯೋವನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೊಂಗ್‌ಥಾಂಗ್ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮೇಘಾಲಯದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ. ಅಲ್ಲದೆ, ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚೆರ್ರಿ ಬ್ಲಾಸಮ್ ಫೆಸ್ಟಿವಲ್‌ನ ಚಿತ್ರಗಳು ಅದ್ಭುತವಾಗಿತ್ತು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೊಂಗ್‌ಥಾಂಗ್ ಮೇಘಾಲಯದ ಪೂರ್ವ-ಖಾಸಿ ಬೆಟ್ಟಗಳಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದ್ದು, ಅಲ್ಲಿ ಗ್ರಾಮಸ್ಥರು ಬಹಳ ವಿಶಿಷ್ಟವಾದ ರೀತಿಯಲ್ಲಿ ಪರಸ್ಪರರನ್ನು ಕರೆಯುತ್ತಾರೆ. ಅವರು ಒಬ್ಬರಿಗೊಬ್ಬರು ಹೆಸರುಗಳನ್ನು ಕರೆಯುವುದಿಲ್ಲ. ಅಲ್ಲದೆ, ಓಯೆ, ಹೇ ಅಥವಾ ಹಲೋ ನಂತಹ ಪದಗಳನ್ನು ಕೂಡ ಅವರು ಬಳಸುವುದಿಲ್ಲ.

ಖಾಸಿ ಬುಡಕಟ್ಟು ಜನಾಂಗದವರು ವಾಸಿಸುವ ಸ್ಥಳದ ನಿವಾಸಿಗಳು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಸಿಳ್ಳೆ ಮತ್ತು ಸಂಗೀತದ ರಾಗದಲ್ಲಿ ಕರೆಯುತ್ತಾರೆ. ಇಲ್ಲಿನ ತಾಯಂದಿರು ಪ್ರತಿ ಮಗುವಿಗೆ ವಿಶೇಷ ರಾಗವನ್ನು ರಚಿಸುವುದರಿಂದ ಪ್ರತಿಯೊಬ್ಬ ನಿವಾಸಿಯ ಹೆಸರು ವಿಶಿಷ್ಟವಾದ ಅಥವಾ ವಿಭಿನ್ನವಾಗಿದ್ದು, ಮಧುರವಾಗಿದೆ.

ಕಾಡಿನಲ್ಲಿದ್ದಾಗ ಒಬ್ಬರನ್ನೊಬ್ಬರು ಕರೆಯಲು, ಗ್ರಾಮಸ್ಥರು 30 ಸೆಕೆಂಡ್‌ಗಳಿಗೂ ಹೆಚ್ಚು ಕಾಲ ಮಧುರವಾಗಿ ಹಾಡುತ್ತಾರೆ. ಇಲ್ಲಿನ ನಿವಾಸಿಗಳು ಸಾಂಪ್ರದಾಯಿಕ ಹೆಸರುಗಳನ್ನು ಹೊಂದಿದ್ದರೂ, ಅದನ್ನು ಸಂವಹನ ಮಾಡುವಾಗ ಬಹಳ ವಿರಳವಾಗಿ ಬಳಸಲಾಗುತ್ತದೆ.

ಸಂಗೀತದಲ್ಲಿ ಒಬ್ಬರನ್ನೊಬ್ಬರು ಕರೆಯುವ ಬಗ್ಗೆ ಮೂಲ ತಿಳಿದಿಲ್ಲ. ಆದರೆ, ಇದು ಐದು ಶತಮಾನಗಳಿಗೂ ಹಿಂದಿನಿಂದ ಅಸ್ತಿತ್ವದಲ್ಲಿದೆ ಎಂದು ಗ್ರಾಮಸ್ಥರು ನಂಬುತ್ತಾರೆ.

ಪ್ರವಾಸೋದ್ಯಮ ಸಚಿವಾಲಯವು ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯ ‘ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮಗಳು’ ಸ್ಪರ್ಧೆಗೆ ಕೊಂಗ್‌ಥಾಂಗ್ ಅನ್ನು ಶಿಫಾರಸು ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...