ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ನಡೆಯುವುದಿಲ್ಲ ಎಂದು ಬೈಂದೂರು ಶಾಸಕ ಬಿ.ಎಂ.ಮ್ ಸುಕುಮಾರಶೆಟ್ಟಿ ತಿಳಿಸಿದ್ದಾರೆ.
ಕಳೆದ 40 ವರ್ಷಗಳಿಂದ ಕೊಲ್ಲೂರು ದೇವಾಲಯದ ಭಕ್ತನಾಗಿದ್ದೇನೆ. 10 ವರ್ಷಗಳ ಕಾಲ ದೇವಾಲಯದ ಆಡಳಿತ ಮೊಕ್ತೇಸರನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ತಿಳಿವಳಿಕೆ ಪ್ರಕಾರ ಕೊಲ್ಲೂರಿನಲ್ಲಿ ಯಾವುದೇ ರೀತಿಯ ಸಲಾಂ ಮಂಗಳಾರತಿ ಇಲ್ಲ ಎಂದು ಅವರು ಹೇಳಿದ್ದಾರೆ.
ಸಂಜೆ ವೇಳೆ ಪ್ರದೋಷ ಪೂಜೆ ನಡೆಯುತ್ತದೆ. ಅದು ಸಲಾಂ ಮಂಗಳಾರತಿ ಎನ್ನುವುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಪ್ರದೋಷ ಪೂಜೆ ಸಲಾಂ ಮಂಗಳಾರತಿ ಆಗಲು ಸಾಧ್ಯವಿಲ್ಲ. ಒಪ್ಪಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೊಲ್ಲೂರು ದೇವಾಲಯದಲ್ಲಿ ಟಿಪ್ಪು ಸುಲ್ತಾನ್ ನೆನಪಿಗಾಗಿ ಸಲಾಂ ಮಂಗಳಾರತಿ ನಡೆಯುತ್ತಿದ್ದು, ಇದನ್ನು ಕೈಬಿಡಬೇಕೆಂದು ವಿಶ್ವ ಹಿಂದೂ ಪರಿಷತ್ ಹೇಳಿತ್ತು.