ಕೊಲ್ಲಾಪುರ: ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ದೇವಸ್ಥಾನಕ್ಕೆ ತೆರಳಿದ್ದ ರಾಜ್ಯದ ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಶಿವಸೆನೆ ಮುಖಂಡರು ಅಡ್ಡಿಯುಂಟು ಮಾಡಿದ ಘಟನೆ ನಡೆದಿದೆ.
ಶಿವಸೇನೆ ಮುಖಂಡ ವಿಜಯ್ ದೇವಣೆ ನೇತೃತ್ವದಲ್ಲಿ ಅಡ್ಡಿಪಡಿಸಿದ್ದು, ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್ ಗೆ ಯಾಕೆ ಅವಕಾಶ ನೀಡಿಲ್ಲ? ಮಾಹಾರಾಷ್ಟ್ರ ನಾಯಕರಿಗೆ ಯಾಕೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ? ಎಂದು ಪ್ರಶ್ನಿಸಿದರು. ಇದೇ ಕಾರಣಕ್ಕೆ ಇಂದು ಕರ್ನಟಕದ ನಾಯಕರಿಗೆ ಮಹಾರಾಷ್ಟ್ರ ಪ್ರವೇಶಕೆ ಅಡ್ಡಿಪಡಿಸಲಾಗಿದೆ ಎನ್ನಲಾಗಿದೆ
ಈ ವೇಳೆ ಪ್ರಭು ಚೌವ್ಹಾಣ್, ಕರ್ನಾಟಕದಲ್ಲಿ ಎಂಇಎಸ್ ನಿಷೇಧಿಸಲಾಗಿದೆ. ಬೆಳಗಾವಿಯಲ್ಲಿ ಅಧುವೇಶನ ನಡೆಯುತ್ತಿದ್ದು, ಎಂಇಎಸ್ ಮಹಾಮೇಳಾವ್ ಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.