
ಬುಧವಾರ ಸಿಕ್ಕ ಈ ವಿಶ್ವಮಾನ್ಯತೆಗೆ ಪಶ್ಚಿಮ ಬಂಗಾಳದ ಜನತೆ ಭಾರೀ ಖುಷಿ ಪಟ್ಟಿದ್ದಾರೆ.
“ಕೋಲ್ಕತ್ತಾದಲ್ಲಿ ಮಾಡುವ ದುರ್ಗಾ ಪೂಜೆಯನ್ನು ಇದೀಗ ತಾನೇ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತಕ್ಕೆ ಶುಭಾಶಯಗಳು,” ಎಂದು ವಿಶ್ವ ಸಂಸ್ಥೆಯ ಯುನೆಸ್ಕೋ ಟ್ವಿಟರ್‌ನಲ್ಲಿರುವ ತನ್ನ ಹ್ಯಾಂಡಲ್ ಮೂಲಕ ತಿಳಿಸಿದೆ.
ಪ್ರತಿ ವರ್ಷ ನವರಾತ್ರಿಯ ವೇಳೆ ದೇಶಾದ್ಯಂತ ದುರ್ಗಾ ಪೂಜೆ ಮಾಡಿದರೂ ಸಹ ಕೋಲ್ಕತ್ತಾದಲ್ಲಿ ವಿಶೇಷವಾಗಿ ಪೆಂಡಾಲ್‌ಗಳನ್ನು ಹಾಕಿ ದಿನಗಳ ಮಟ್ಟಿಗೆ ಆಚರಿಸುವ ಈ ಹಬ್ಬದ ವೇಳೆ ದುರ್ಗೆಯ ವಿವಿಧ ಅವತಾರಗಳ ಮೂರ್ತಿಗಳನ್ನು ರಚಿಸಿ, ಪೆಂಡಾಲ್‌ಗಳನ್ನು ಅದ್ಧೂರಿಯಾಗಿ ಅಲಂಕರಿಸಲಾಗುತ್ತದೆ.