alex Certify ʼಅರ್ಧನಾರೀಶ್ವರʼ ಮೂರ್ತಿಯೊಂದಿಗೆ ದುರ್ಗಾ ಪೂಜೆ ಸಂಭ್ರಮಿಸುತ್ತಿರುವ ತೃತೀಯ ಲಿಂಗಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅರ್ಧನಾರೀಶ್ವರʼ ಮೂರ್ತಿಯೊಂದಿಗೆ ದುರ್ಗಾ ಪೂಜೆ ಸಂಭ್ರಮಿಸುತ್ತಿರುವ ತೃತೀಯ ಲಿಂಗಿಗಳು

ಶರನ್ನವರಾತ್ರಿ ವಿಶೇಷವಾಗಿ ಆದಿಶಕ್ತಿಯನ್ನು ಪೂಜಿಸುವ ಪುಣ್ಯಕಾಲ. ದೇಶಾದ್ಯಂತ ಇದನ್ನು ಆಚರಿಸಲಾಗುತ್ತದೆ. ಹಾಗಿದ್ದೂ, ಪಶ್ಚಿಮ ಬಂಗಾಳದಲ್ಲಿ ಮಾತ್ರ ದುರ್ಗಾ ಪೂಜೆ ಬಹಳ ವಿಶಿಷ್ಟ. ಇದು ಇಡೀ ರಾಜ್ಯವನ್ನೇ ಸಾಂಸ್ಕೃತಿಕವಾಗಿ ಒಂದುಗೂಡಿಸುವ ಧಾರ್ಮಿಕ ಉತ್ಸವ ಎನಿಸಿದೆ. ಗಣಪತಿ ಹಬ್ಬದಲ್ಲಿ ಹೇಗೆ ದೇಶದ ವಿವಿಧ ರಾಜ್ಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಗಣಪತಿ ಪೆಂಡಾಲ್‌ಗಳ ವೈಭವ ಜೋರಾಗಿರುತ್ತದೆಯೋ, ಅದೇ ರೀತಿ ದಸರಾದಲ್ಲಿ ಬಂಗಾಳದಾದ್ಯಂತ ದುರ್ಗಾ ಪೆಂಡಾಲ್‌ ಹಾಕಿ ಸಂಭ್ರಮಿಸಲಾಗುತ್ತದೆ.

ವಿಶೇಷ ಅಲಂಕಾರ, ಐಷಾರಾಮಿ ಒಡವೆಗಳು, ಚಿನ್ನದ ಕಣ್ಣಿರುವ ದುರ್ಗಾ ಮೂರ್ತಿಯಂಥ ವಿಶೇಷತೆಗಳಿರುವ ಪೆಂಡಾಲ್‌ಗಳನ್ನು ಸ್ಥಾಪಿಸಲಾಗುತ್ತದೆ. ಜನರು ಈ ಪೆಂಡಾಲ್‌ಗಳಿಗೆ ಭೇಟಿ ನೀಡಿ ಭಕ್ತಿ-ಭಾವ ಮೆರೆಯುತ್ತಾರೆ.

ದೇಹದ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಹೀಗೆ ಮಾಡಿ

ಈ ಬಾರಿ ಕೋಲ್ಕೊತಾದಲ್ಲಿ ವಿಶೇಷವಾಗಿ ’ಅರ್ಧನಾರೀಶ್ವರ ಮೂರ್ತಿ’ಯನ್ನು ದುರ್ಗಾ ಪೆಂಡಾಲ್‌ವೊಂದರಲ್ಲಿ ಇರಿಸಲಾಗಿದ್ದು, ಭಾರಿ ಜನರನ್ನು ಸೆಳೆಯುತ್ತಿದೆ. ಯಾಕೆಂದರೆ, ಇದರ ಸ್ಥಾಪನೆ ಮಾಡಿರುವವರು ತೃತೀಯ ಲಿಂಗಿಗಳು. ಕಳೆದ ನಾಲ್ಕು ವರ್ಷಗಳಿಂದಲೂ ಈ ಮಣ್ಣಿನ ಮೂರ್ತಿಯನ್ನು ನೀರಿಗೆ ಬಿಟ್ಟೇ ಇಲ್ಲ. ಸುರಕ್ಷಿತವಾಗಿ ಇರಿಸಿಕೊಂಡು ಪೂಜಿಸಲಾಗುತ್ತಿದೆಯಂತೆ. ಗರೀಮಾ ಗೃಹ ಪ್ರದೇಶದಲ್ಲಿನ ಅಸೋಸಿಯೇಷನ್‌ ಆಫ್‌ ಹಿಜ್ರಾ ಬಂಗಾಳದ ಪೋಷಕರಾದ ರಣಜೀತ್‌ ಸಿನ್ಹಾ ಅವರ ಅಪಾರ್ಟ್‌ಮೆಂಟ್‌ನಲ್ಲಿ ಅರ್ಧನಾರೀಶ್ವರ ಮೂರ್ತಿ ಪ್ರತಿಷ್ಠಾಪನೆ ಆಗಿದೆ.

ಖಾಲಿ ಹೊಟ್ಟೆಯಲ್ಲಿ ʼಚಹಾʼ ಕುಡಿಯುವ ಮುನ್ನ ನಿಮಗಿದು ತಿಳಿದಿರಲಿ

ಈ ಮೂರ್ತಿಯನ್ನು ತೃತೀಯ ಲಿಂಗಿಗಳೇ ಭಕ್ತಿ-ಭಾವದಿಂದ ತಯಾರಿಸಿದ್ದಾರಂತೆ. ಈ ಪೆಂಡಾಲ್‌ ಅ.7 ರಂದು ಉದ್ಘಾಟನೆ ಆಗಿದ್ದು, ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಭಾರತದ ಆಸ್ಪ್ರೇಲಿಯಾ ರಾಯಭಾರಿ ರೋವನ್‌ ಐನ್ಸ್‌ವರ್ಥ್‌ ಅವರು ಆಗಮಿಸಿದ್ದು ವಿಶೇಷ.

ಇದಲ್ಲದೇ, 145 ಅಡಿ ಎತ್ತರದ ಬುರ್ಜ್‌ ಖಲೀಫಾ ಪೆಂಡಾಲ್‌ವೊಂದನ್ನು ಕೂಡ ಶ್ರೀವುಮಿ ಸ್ಪೋರ್ಟಿಂಗ್‌ ಕ್ಲಬ್‌ನಲ್ಲಿ ಸ್ಥಾಪಿಸಲಾಗಿದೆ. ಇದರಲ್ಲಿನ ದುರ್ಗಾ ಮೂರ್ತಿಗೆ 45 ಕೆ.ಜಿ. ಚಿನ್ನದ ಅಲಂಕಾರ ಮಾಡಲಾಗಿದೆ. 250 ಕೆಲಸಗಾರರು ಈ ಪೆಂಡಾಲ್‌ ಮಾಡಿದ್ದು, ಇದನ್ನು ಕಾಣಲು ಜನರು ಮುಗಿಬೀಳುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...