ಕೋಲ್ಕತ್ತಾ: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಜಿ. ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರನ್ನು ಆಗಸ್ಟ್ 17 ರಂದು ಸುಮಾರು 13 ಗಂಟೆಗಳ ವಿಚಾರಣೆಯ ನಂತರ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಸಿಬಿಐ) ಬಿಡುಗಡೆ ಮಾಡಿದೆ. ಆಗಸ್ಟ್ 16 ರಂದು 15 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಸಂದೀಪ್ ಘೋಷ್ ಅವರಿಗೆ ಸಿಬಿಐ ಆಗಸ್ಟ್ 18 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಸಂದೀಪ್ ಘೋಷ್ ಅವರು ಶನಿವಾರ ಕೋಲ್ಕತ್ತಾದ ಕೇಂದ್ರೀಯ ತನಿಖಾ ದಳದ ಕಚೇರಿಗೆ ಆಗಮಿಸಿದ್ದು, ಅವರನ್ನು ಬಂಧಿಸಲಾಗಿದೆ ಎಂಬ ವದಂತಿ ಹರಡಿತ್ತು.
ಕೋಲ್ಕತ್ತಾದ CGO ಕಾಂಪ್ಲೆಕ್ಸ್ನಲ್ಲಿರುವ ಸಿಬಿಐ ವಿಶೇಷ ಅಪರಾಧ ವಿಭಾಗಕ್ಕೆ ಜಂಟಿ ನಿರ್ದೇಶಕ ಮತ್ತು ಹೆಚ್ಚುವರಿ ನಿರ್ದೇಶಕರನ್ನೊಳಗೊಂಡ ಸಿಬಿಐ ತಂಡವೂ ಆಗಮಿಸಿದೆ. ಭಾನುವಾರವೂ ಸಂದೀಪ್ ಘೋಷ್ ಅವರ ವಿಚಾರಣೆ ನಡೆಯಲಿದೆ.