ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಜನರ ದಿನನಿತ್ಯದ ಬದುಕೇ ಅನಿಶ್ಚಿತತೆಯ ಕೂಪದಲ್ಲಿ ಸಿಲುಕಿದೆ. ಮನುಕುಲದ ಅಷ್ಟೂ ಚಟುವಟಿಕೆಗಳಿಗೆ ಹೊಸ ದಿಕ್ಕು ತೋರುವ ಎಲ್ಲಾ ಸಾಧ್ಯತೆಗಳನ್ನು ಈ ಸಾಂಕ್ರಮಿಕದ ಸಂಕಷ್ಟ ತಂದಿಟ್ಟಿದೆ. ಇದಕ್ಕೆ ಸರ್ಕಾರೀ ಸಂಸ್ಥೆಗಳೂ ಹೊರತಲ್ಲ.
ಪಶ್ಚಿಮ ಬಂಗಾಳದ ಪೊಲೀಸ್ ಶ್ವಾನಗಳಿಗೆ ತರಬೇತಿ ನೀಡಲು ಇದ್ದ ವೇಳಾಪಟ್ಟಿಯನ್ನೇ ಸೋಂಕಿನ ಕಾರಣದಿಂದ ಮಾರ್ಪಾಡು ಮಾಡಲಾಗಿದೆ. ಹೊರಾಂಗಣ ಚಟುವಟಿಕೆಗಳಿಗೆ ಸಾಂಕ್ರಮಿಕದ ಅಡಚಣೆ ಇರುವ ಕಾರಣ ಕೋಲ್ಕತ್ತಾ ಪೊಲೀಸ್ ತನ್ನ 40 ಶ್ವಾನಗಳಿಗೆ ತರಬೇತಿ ನೀಡುವ ಸಂಬಂಧ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ.
ತರಬೇತುದಾರರಲ್ಲಿ ಅನೇಕರಿಗೆ ಕೋವಿಡ್-19 ಸೋಂಕು ತಗುಲಿರುವ ಕಾರಣ ಶ್ವಾನಗಳಿಗೆ ಹೊಸ ಏರ್ಪಾಡೊಂದನ್ನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಸಾಂಪ್ರದಾಯಿಕ ತರಬೇತಿ ಬದಲಿಗೆ ಈಜುಕೊಳದಲ್ಲಿ ವ್ಯಾಯಾಮ ಮಾಡಿಸುವ ಮೂಲಕ ನಾಯಿಗಳಿಗೆ ಫಿಟ್ ಆಗಿರಲು ಕಾರ್ಯಕ್ರಮಗಳನ್ನು ಪ್ಲಾನ್ ಮಾಡಿಕೊಂಡಿದೆ ಕೋಲ್ಕತ್ತಾ ಪೊಲೀಸ್.