ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ 39 ವರ್ಷದ ಮಹಿಳೆಯೊಬ್ಬರು ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾಗ ಸಿಬ್ಬಂದಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳೆ ಫೂಲ್ಬಗಾನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ರೋಗಿಯನ್ನು ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಒಟಿಗೆ ವರ್ಗಾಯಿಸಿ ಅರಿವಳಿಕೆ ನೀಡಿದ್ದು, 11 ಗಂಟೆಗೆ ಶಸ್ತ್ರಚಿಕಿತ್ಸೆ ಮುಗಿದಿದೆ, ಮಹಿಳೆ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿರುವಾಗ ಯಾರೋ ತನ್ನ ಖಾಸಗಿ ಭಾಗಗಳನ್ನು ಮುಟ್ಟುತ್ತಿರುವಂತೆ ಅನಿಸಿತು ಎಂದು ಆಕೆ ದೂರು ನೀಡಿದ್ದಾಳೆ.
ನನ್ನ ಬಲಭಾಗದಲ್ಲಿ ನಿಂತಿರುವ ಯಾರೋ ನನ್ನನ್ನು ತಬ್ಬಿಕೊಳ್ಳುತ್ತಿದ್ದರು, ಆಗ ನನಗೆ ತುಂಬಾ ನೋವು ಕಾಣಿಸಿಕೊಂಡಿತ್ತು. ನಾನು ನಿಧಾನವಾಗಿ ಪ್ರಜ್ಞೆಗೆ ಮರಳುತ್ತಿದ್ದೆ. ನಾನು ಕೆಳಗೆ ಇದ್ದುದರಿಂದ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಅರಿವಳಿಕೆ ಪರಿಣಾಮ ಕೆಲ ಸಮಯದ ನಂತರ ನಾನು ನನ್ನ ಕಣ್ಣುಗಳನ್ನು ತೆರೆದಾಗ ನನ್ನ ಖಾಸಗಿ ಭಾಗಗಳಲ್ಲಿ ಗುರುತುಗಳನ್ನು ಗಮನಿಸಿದೆ ಎಂದು ಮಹಿಳೆ ದೂರು ನೀಡಿದ್ದಾರೆ.
ಅವರ ಪ್ರಕಾರ, ಅಪರಾಧ ನಡೆದಾಗ ಯಾವುದೇ ಮಹಿಳಾ ಸಿಬ್ಬಂದಿ ಇರಲಿಲ್ಲ. ಆಪರೇಷನ್ ಥಿಯೇಟರ್ ಒಳಗೆ ನನಗೆ ಏನಾಯಿತು ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಬಲ ಎದೆಯ ಮೇಲೆ ಗುರುತುಗಳು ಗೋಚರಿಸುತ್ತವೆ ಎಂದು ಶುಕ್ರವಾರ ಫೂಲ್ಬಗಾನ್ ಪೊಲೀಸ್ ಠಾಣೆಯಲ್ಲಿ ರೋಗಿಯೇ ಲಿಖಿತ ದೂರು ದಾಖಲಿಸಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ ಕೋಲ್ಕತ್ತಾ ಪೊಲೀಸರು ಆಪಾದಿತ ಕಿರುಕುಳದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ದೂರುದಾರರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ. ಇದು ಮಹಿಳೆ ಎತ್ತಿರುವ ಅತ್ಯಂತ ಗಂಭೀರವಾದ ಆರೋಪವಾಗಿದೆ. ಅಪರಿಚಿತ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಪ್ರಿಯೋಬ್ರತೊ ರಾಯ್ ತಿಳಿಸಿದ್ದಾರೆ.
ನಾವು ಅಂತಹ ಎಲ್ಲಾ ಆರೋಪಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ನಮ್ಮ ಸಂಪೂರ್ಣ ಸಹಕಾರದೊಂದಿಗೆ ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.