ನಮ್ಮ ದೇಶದ ಅನೇಕ ಭಾಗಗಳಲ್ಲಿ ಈಗಾಗಲೇ ಮೆಟ್ರೋ ಸಂಚಾರ ಯಶಸ್ಸಿನ ಹಾದಿಯಲ್ಲಿದೆ. ಈ ನಡುವೆ ಕೋಲ್ಕತಾ ವಿಶಿಷ್ಟವಾಗಿ ನೀರೊಳಗಿನ ಮೆಟ್ರೋವನ್ನು ಪ್ರಾರಂಭಿಸಲು ಸಕಲ ಸಿದ್ಧತೆಗಳು ಮಾಡಿಕೊಂಡಿತ್ತು. ಇದು ದೇಶದ ಮೊದಲ ನೀರೊಳಗಿನ ಮೆಟ್ರೋ ಎಂಬುದು ಮತ್ತೊಂದು ವಿಶೇಷವಾಗಿದೆ.
ಇದೀಗ ಅದರ ಕಾರ್ಯ ಪೂರ್ಣಗೊಂಡಿದೆ. ಕೋಲ್ಕತಾದ ನೀರೊಳಗಿನ ಮೆಟ್ರೋ ವರ್ಷಾಂತ್ಯದ ವೇಳೆಗೆ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಹೌರಾ ಮೈದಾನದಿಂದ ಎಸ್‌ಪ್ಲನೇಡ್‌ವರೆಗೆ ಕಾರ್ಯನಿರ್ವಹಿಸಲಿದೆ.
ಕೋಲ್ಕತಾದ ಹೂಗ್ಲಿ ನದಿಯ ಕೆಳಗೆ ಭಾರತದ ಮೊದಲ ನೀರೊಳಗಿನ ಮೆಟ್ರೋ ರೈಲು ಏಪ್ರಿಲ್ 12 ರಂದು ನೀರಿನ ಮಟ್ಟಕ್ಕಿಂತ 32 ಮೀಟರ್ ಕೆಳಗೆ ನೀರಿನ ಸುರಂಗದ ಮೂಲಕ ಮಹಾಕರನ್‌ನಿಂದ ಹೌರಾಕ್ಕೆ ತನ್ನ ಮೊದಲ ಪ್ರಾಯೋಗಿಕ ಪ್ರಯಾಣವನ್ನು ಮಾಡಿತು.
1984 ರಲ್ಲಿ ದೇಶದಲ್ಲೇ ಮೊದಲ ಮೆಟ್ರೋವನ್ನು ಪಡೆದ ನಗರ ಕೋಲ್ಕತಾ ಆಗಿರುವುದರಿಂದ ಇದನ್ನು ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗಿದೆ.