ಕೋಲ್ಕತ್ತಾ ಮೆಟ್ರೋ ನೀರೊಳಗಿನ ಮಾರ್ಗದ ಉದ್ಘಾಟನೆ ಮಾಡಿದ್ದು, ಇದು ಹೌರಾ ಮತ್ತು ಸೀಲ್ದಾ ನಡುವಿನ ಪ್ರಯಾಣದ ಸಮಯವನ್ನು 40 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ.
ಈ ಮೆಟ್ರೋ ಹೌರಾ ಮೈದಾನದಿಂದ ಎಸ್ಪ್ಲೇನೇಡ್ ವರೆಗೆ ಹೂಗ್ಲಿ ನದಿಯ ಕೆಳಗಿರುವ ಸುರಂಗದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಭಾರತದಲ್ಲಿ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾರ್ಗದುದ್ದಕ್ಕೂ ನಾಲ್ಕು ನಿಲ್ದಾಣಗಳಿದ್ದು, ಸುರಂಗದ ಮೂಲಕ ಪ್ರಯಾಣಕ್ಕೆ ಕೇವಲ 45 ಸೆಕೆಂಡು ತೆಗೆದುಕೊಳ್ಳುತ್ತದೆ. ಈ ಸುರಂಗವು ಹೌರಾ ಮತ್ತು ಸೀಲ್ದಾ ನಡುವಿನ ಪ್ರಯಾಣದ ಸಮಯವನ್ನು 40 ನಿಮಿಷಗಳಿಗೆ ಕಡಿಮೆ ಮಾಡುತ್ತದೆ, ರಸ್ತೆಯ ಮೂಲಕ 90 ನಿಮಿಷ ಬೇಕಾಗುತ್ತದೆ.
ಈ ಮಾರ್ಗವು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 520 ಮೀಟರ್ ಉದ್ದದ ಸುರಂಗ ಮಾರ್ಗ ಇದಾಗಿದೆ. ಇದು ನದಿಯ ತಳದಿಂದ 13 ಮೀಟರ್ ಮತ್ತು ನೆಲಮಟ್ಟದಿಂದ 33 ಮೀಟರ್ ಕೆಳಗೆ ಇದೆ.