ಕೊರೊನಾ ಸೋಂಕು ಒಂದಾದ್ಮೇಲೆ ಒಂದರಂತೆ ಹೊಸ ಸಮಸ್ಯೆ ಹುಟ್ಟು ಹಾಕ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ಜನರು ಬೇರೆ ಬೇರೆ ಸಮಸ್ಯೆ ಎದುರಿಸುತ್ತಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಿಗೆ ಧ್ವನಿ ಸಮಸ್ಯೆಯುಂಟಾಗಿದೆ. ಇದು ತಾತ್ಕಾಲಿಕ ಸಮಸ್ಯೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಕೊರೊನಾದಿಂದ ಚೇತರಿಸಿಕೊಂಡವರಿಗೆ ಸರಿಯಾಗಿ ಮಾತನಾಡಲು ಆಗ್ತಿಲ್ಲ. ಈ ಕುರಿತು ಸಿಎಮ್‌ಆರ್‌ಐ ಆಸ್ಪತ್ರೆಯ ಶ್ವಾಸಕೋಶ ಶಾಸ್ತ್ರದ ನಿರ್ದೇಶಕ ರಾಜ್ ಧರ್ ಮಾಹಿತಿ ನೀಡಿದ್ದಾರೆ. ಭಾಗಶಃ ಧ್ವನಿ ನಷ್ಟವು, ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಯುಂಟು ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಧ್ವನಿ ಮರಳುತ್ತದೆ ಎಂದವರು ತಿಳಿಸಿದ್ದಾರೆ.
ಗಂಟಲಿನ ಸೋಂಕಿನಿಂದಾಗಿ ಊತದ ಸಮಸ್ಯೆ ಉಂಟಾಗಬಹುದು. ಈ ಕಾರಣದಿಂದಾಗಿ ಸ್ವಲ್ಪ ಸಮಯದವರೆಗೆ ಧ್ವನಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಬಹುದು.
ಕೋವಿಡ್ ಸೋಂಕಿಗೆ ಒಳಗಾದ ನಂತರ ಮೊದಲ ಅಥವಾ ಮೂರನೇ ವಾರದಿಂದ 3 ತಿಂಗಳವರೆಗೆ ಧ್ವನಿಯ ಸಮಸ್ಯೆ ಮುಂದುವರಿಯಬಹುದು. ಧ್ವನಿ ನಷ್ಟವಾಗುವುದಿಲ್ಲ. ಈ ಸಮಸ್ಯೆ ಕಾಡುವವರು ಖಿನ್ನತೆಗೆ ಒಳಗಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಉರಿಯೂತಕ್ಕೆ ಚಿಕಿತ್ಸೆ ನೀಡಲು ಸ್ಟಿರಾಯ್ಡ್‌ಗಳು ಸಾಕು ಎಂದು ಅವರು ತಿಳಿಸಿದ್ದಾರೆ. ಊತ ಕಡಿಮೆಯಾದಾಗ, ಧ್ವನಿ ಮರಳುತ್ತದೆ ಎಂದವರು ಹೇಳಿದ್ದಾರೆ.