ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಾಕಷ್ಟು ಹೆಚ್ಚಿದೆ. ಈ ವೇಳೆಯಲ್ಲಿ ಕೃತಕ ಆಮ್ಲಜನಕದ ಪೂರೈಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ.
ವಿಡಿಯೋ ಡಿಲಿಟ್ ಮಾಡದ ಕಾರಣಕ್ಕೆ ಟ್ವಿಟರ್ ವಿರುದ್ಧ ಪ್ರಕರಣ ದಾಖಲು
ಈ ಹೋರಾಟದ ನಡುವೆಯೇ ಕೋಲ್ಕತ್ತಾ ಮೂಲದ ವಿಜ್ಞಾನಿ ರಾಮೇಂದ್ರ ಲಾಲ್ ಮುಖರ್ಜಿ ಅವರು ಬ್ಯಾಟರಿ ಚಾಲಿತ ಪೋರ್ಟಬಲ್ ವೆಂಟಿಲೇಟರ್ ಅನ್ನು ಅನ್ವೇಷಣೆ ಮಾಡಿದ್ದಾರೆ. ಈ ವಸ್ತುವನ್ನು ಉಸಿರಾಟದ ಸಮಸ್ಯೆಯಿರುವ ಎಲ್ಲಾ ವಯಸ್ಸಿನ ಜನರೂ ಬಳಸಬಹುದಾಗಿದೆ. 250 ಗ್ರಾಂ ತೂಗುವ ಈ ವೆಂಟಿಲೇಟರ್ ಅನ್ನು ಮೊಬೈಲ್ ಚಾರ್ಜರ್ ಮೂಲಕ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಬಾಳಿಕೆ ಬರುತ್ತದೆ.
ಆಸ್ಪತ್ರೆಯಲ್ಲಿದ್ದ ಮಹಿಳಾ ರೋಗಿ ನಾಪತ್ತೆಯಾದ ನಿಗೂಢ ರಹಸ್ಯ ಭೇದಿಸಿದ ಪೊಲೀಸರು
ವೃತ್ತಿಯಲ್ಲಿ ಇಂಜಿನಿಯರ್ ಸಹ ಆಗಿರುವ ಮುಖರ್ಜಿ ತಮ್ಮ ಈ ಸಾಧನದ ಕಾರ್ಯವೈಖರಿಯನ್ನು ವಿವರಿಸಿದ್ದಾರೆ. ತಮ್ಮ ಈ ಡಿವೈಸ್‌ನಲ್ಲಿ ಎರಡು ಭಾಗಗಳಿದ್ದು, ಒಂದು ಪವರ್ ಯೂನಿಟ್ ಮತ್ತೊಂದು ವೆಂಟಿಲೇಟರ್ ಎನ್ನುತ್ತಾರೆ ಮುಖರ್ಜಿ. ವೆಂಟಿಲೇಟರ್ ಅನ್ನು ಮೌತ್‌ಪೀಸ್‌ಗೆ ಅಳವಡಿಸಿದ್ದು, ಪವರ್ ಬಟನ್ ಅನ್ನು ಒಮ್ಮೆ ಆನ್ ಮಾಡಿದರೆ, ಹೊರಗಿನಿಂದ ವೆಂಟಿಲೇಟರ್ ಗಾಳಿಯನ್ನು ಹೀರಿಕೊಂಡು, ಅತಿನೇರಳೆ ಚೇಂಬರ್ ಮೂಲಕ ಹಾದುಹೋಗಿ, ಅಲ್ಲಿ ಶುದ್ಧೀಕಣಗೊಳ್ಳುತ್ತದೆ. ಅಲ್ಲಿ ಸ್ವಚ್ಛವಾದ ಗಾಳಿ ಮೌತ್‌ಪೀಸ್‌ನತ್ತ ಧಾವಿಸುತ್ತದೆ.