
ಕೊಲ್ಲಾಪುರದ ವೃದ್ಧಾಶ್ರಮದಲ್ಲಿರುವ ವೃದ್ಧ ದಂಪತಿಗಳು ತಮ್ಮ ಉಳಿದ ದಿನಗಳನ್ನು ಖಿನ್ನತೆಯಲ್ಲಿ ಬದುಕಲು ಬಿಡಲಿಲ್ಲ. ಬದಲಿಗೆ ಈ ಜೋಡಿ ಮಾಗಿದ ವಯಸ್ಸಿನಲ್ಲಿ ಇಲ್ಲಿ ಪ್ರೀತಿಯನ್ನು ಕಂಡು ಮದುವೆಯಾಗುವ ಮೂಲಕ ತಮ್ಮ ಪ್ರೇಮಕಥೆಗೆ ಮುದ್ರೆ ಹಾಕಿದ್ದಾರೆ.
ಕೊಲ್ಲಾಪುರದ ಶಿರೋಲ್ ತಾಲೂಕಿನ ಘೋಸರವಾಡದಲ್ಲಿ ಇವರಿಬ್ಬರ ಮದುವೆ ನಡೆದಿದೆ. ಘೋಸರವಾಡದಲ್ಲಿರುವ ಜಾನಕಿ ವೃದ್ಧಾಶ್ರಮದಲ್ಲಿ ಅನಸೂಯಾ ಶಿಂಧೆ (70) ಮತ್ತು ಬಾಬುರಾವ್ ಪಾಟೀಲ್ (75) ಎಂಬ ಇಬ್ಬರು ಹಿರಿಯ ಜೀವಿಗಳಿದ್ದರು. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಅವರು ಈಗ ಜೀವನ ಸಂಗಾತಿಯಾಗಿದ್ದಾರೆ.
ಅವರ ಪ್ರೀತಿ ಮತ್ತು ಮದುವೆ ಇತ್ತೀಚಿನ ದಿನಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅನಸೂಯಾ ಪುಣೆಯ ವಘೋಲಿಯಿಂದ ಬಂದಿದ್ದರೆ, ಬಾಬುರಾವ್ ಶಿರೋಲ್ ತಾಲೂಕಿನ ಶಿವನಕವಾಡಿಯವರು. ಇಬ್ಬರೂ ತಮ್ಮ ಸಂಗಾತಿಯನ್ನು ಕಳೆದುಕೊಂಡು ಕಳೆದ ಎರಡು ವರ್ಷಗಳಿಂದ ಈ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಪ್ರೇಮಕ್ಕೆ ಬಿದ್ದು, ಈಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.