![](https://kannadadunia.com/wp-content/uploads/2023/06/breaking-news-poster-design-template-d020bd02f944a333be71e17e3a38db24_screen-1.jpg)
ಕೋಲಾರ: ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿಯೇ ಸಂಸದರು ಹಾಗೂ ಶಾಸಕರ ನಡುವೆ ಗಲಾಟೆ ನಡೆದು ಜಟಾಪಟಿ ನಡೆದ ಘಟನೆ ಕೋಲಾರದಲ್ಲಿ ನಡೆದಿದೆ.
ಇಂದು ರಾಜ್ಯಾದ್ಯಂತ ಏಕಕಾಲದಲ್ಲಿ ಜನತಾದರ್ಶನಕ್ಕೆ ಚಾಲನೆ ದೊರೆತಿದ್ದು, ಆಯಾ ಜಿಲ್ಲೆಗಳಲ್ಲಿ ಕಾರ್ಯಕ್ರಕ್ಕೆ ಚಾಲನೆ ನೀಡಲಾಗಿದೆ. ಕೋಲಾರ ಜಿಲ್ಲೆಯಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಶಾಸಕ ಎಸ್.ನಾರಾಯಣಸ್ವಾಮಿ ನಡುವೆ ಜಟಾಪಟಿ ನಡೆದಿದ್ದು, ಇಬ್ಬರೂ ವೇದಿಕೆ ಮೇಲೆಯೇ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸಮ್ಮುಖದಲ್ಲಿಯೇ ಸಂಸದ ಹಾಗೂ ಬಂಗಾರಪೇಟೆ ಶಾಸಕ ಬೈದಾಡಿಕೊಂಡಿದ್ದಾರೆ. ಭೂಗಳ್ಳರ ಜೊತೆ ಸೇರಿಕೊಂಡು ಕಾರ್ಯಕ್ರಮ ಮಾಡ್ತೀಯಾ? ಎಂದು ಸಂಸದ ಮುನಿಸ್ವಾಮಿ ಪ್ರಶ್ನಿಸಿದ್ದಾರೆ. ಈ ವೇಳೆ ಶಾಸಕ ನಾರಾಯಣಸ್ವಾಮಿ ಕೋಪ ನೆತ್ತಿಗೇರಿದ್ದು, ಬಾಯಿಗೆ ಬಂದಂತೆ ರೇಗಾಡಿದ್ದಾರೆ. ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಾರಾಯಣಸ್ವಾಮಿ ಇಬ್ಬರೂ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ.
ಈ ವೇಳೆ ವೇದಿಕೆಗೆ ಆಗಿಸಿದ ಪೊಲೀಸ್ ಅಧಿಕಾರಿಗಳು ಸಂಸದ ಹಾಗೂ ಶಾಸಕ ಇಬ್ಬರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಜನತಾದರ್ಶನಕ್ಕೆ ಸಮಸ್ಯೆ ಹೇಳಿಕೊಳ್ಳಲು ಬಂದ ಜನರು ವೇದಿಕೆ ಮೇಲೆ ಜನಪ್ರತಿನಿಧಿಗಳ ಕಿತ್ತಾಟ ಕಂಡು ಹಿಡಿಶಾಪ ಹಾಕಿದ್ದಾರೆ.