
ಕೋಲಾರ: ಗಾಂಜಾಮತ್ತಿನಲ್ಲಿ ಮೂವರು ಯುವಕರು ಪುಂಡಾಟ ಮೆರೆದಿದ್ದು, ವ್ಯಕ್ತಿಯೋರ್ವರನ್ನು ಮನಬಂದಂತೆ ಕಚ್ಚಿ ಗಾಯಗೊಳಿಸಿರುವ ಘಟನೆ ಕೋಲಾರ ಜಿಲ್ಲೆಯ ಕೊಂಡರಾಜನಹಳ್ಳಿಯಲ್ಲಿ ನಡೆದಿದೆ.
ತಡರಾತ್ರಿ ಮೂವರು ಯುವಕರ ಗುಂಪು ಗಾಂಜಾ ಮತ್ತಲ್ಲಿ ಗ್ರಾಮದಲ್ಲಿ ದಾಂಧಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗ್ರಾಮಸ್ಥರ ಕೈಯನ್ನು ಕಚ್ಚಿದ್ದಾರೆ. ಕೊಂಡರಾಜನಹಳ್ಳಿ ನಿವಾಸಿ ನಾಗರಾಜ್ ಎಂಬುವವರ ಕೈಗೆ ಗಂಭೀರವಾದ ಗಾಯಗಳಾಗಿವೆ.
ಮೂವರು ಯುವಕರನ್ನು ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.