ಕೋಲಾರ: ಕೋಲಾರ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಕೃಷ್ಣಾರೆಡ್ಡಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದೆ. ಕೋಲಾರ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ಆಚಾರ್ ನೀಡಿದೆ ಎಂದು ಕೋಲಾರದಲ್ಲಿ ಶಾಸಕ ಶ್ರೀನಿವಾಸ ಗೌಡ ಹೊಸ ಬಾಂಬ್ ಸೇರಿಸಿದ್ದಾರೆ.
ಕೃಷ್ಣಾರೆಡ್ಡಿಗೆ ಸಚಿವ ಸುಧಾಕರ್ ಬಿಜೆಪಿ ಟಿಕೆಟ್ ಆಫರ್ ನೀಡಿದ್ದಾರೆ. ಜನವರಿ 25 ರಂದು ಸಚಿವ ಸುಧಾಕರ್ ಅವರು ಕೃಷ್ಣಾರೆಡ್ಡಿ ಮನೆಗೆ ಭೇಟಿ ನೀಡಿದ್ದ.ರು ನಾವೇ ದುಡ್ಡು ಕೊಡುತ್ತೇವೆ. ನೀವು ಚುನಾವಣೆಗೆ ಸ್ಪರ್ಧಿಸಿ ಎಂದು ಆಫರ್ ನೀಡಲಾಗಿದೆ. ವರ್ತೂರು ಪ್ರಕಾಶ್ ಸಮ್ಮುಖದಲ್ಲಿಯೇ ಕೃಷ್ಣಾರೆಡ್ಡಿಗೆ ಬಿಜೆಪಿ ಟಿಕೆಟ್ ಆಫರ್ ನೀಡಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎನ್ನುವ ನಂಬಿಕೆಯಲ್ಲಿ ಬಿಜೆಪಿ ಇದೆ. ಕೃಷ್ಣಾರೆಡ್ಡಿಗೆ ಸಚಿವ ಸುಧಾಕರ್ ಬಿಜೆಪಿ ಟಿಕೆಟ್ ಆಫರ್ ನೀಡಿದ್ದು ಏಕೆ? ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಅವರ ಮನೆಗೆ ಹೋಗಿದ್ದು ಏಕೆ? ಎಂದು ಬಿಜೆಪಿ ನಾಯಕರು ಮತ್ತು ಸಚಿವ ಸುಧಾಕರ್ ಅವರಿಗೆ ಶಾಸಕ ಶ್ರೀನಿವಾಸಗೌಡ ಪ್ರಶ್ನಿಸಿದ್ದು, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದು ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.