ಕೋಲಾರ : ಯುಗಾದಿ ಹಬ್ಬದ ದಿನ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಯುವಕ ಮೃತಪಟ್ಟ ಘಟನೆ ಬೀರಂಡಹಳ್ಳಿ ಬಳಿ ನಡೆದಿದೆ.
ಮೃತ ಯುವಕನನ್ನು ಬೀರಂಡಹಳ್ಳಿ ಗ್ರಾಮದ ಲಿಖಿತ್ (20) ಎಂದು ಗುರುತಿಸಲಾಗಿದೆ. 11 ಗಂಟೆ ವೇಳೆಗೆ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.