ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ನಡುವಿನ ಐಪಿಎಲ್ 2025 ಪಂದ್ಯದ ಮೊದಲು, ವಿರಾಟ್ ಕೊಹ್ಲಿಯ ಮಾನವೀಯತೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೋಟೆಲ್‌ನಿಂದ ಕ್ರೀಡಾಂಗಣದವರೆಗೆ ಅವರನ್ನು ಹಿಂಬಾಲಿಸಿದ ಮಗುವಿಗೆ ಕೊಹ್ಲಿ ಆಟೋಗ್ರಾಫ್ ನೀಡಿದ್ದಾರೆ. ಕೊಹ್ಲಿ ಭದ್ರತಾ ಸಿಬ್ಬಂದಿಗೆ ಮಗುವನ್ನು ಕರೆತರಲು ಹೇಳಿ, ತಂಡದ ಬಸ್‌ನಲ್ಲಿರುವಾಗಲೇ ಆಟೋಗ್ರಾಫ್ ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಪಂದ್ಯದ ಬಗ್ಗೆ ಹೇಳುವುದಾದರೆ, ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳ ನಡುವಿನ ಪಂದ್ಯದಲ್ಲಿ ಆರ್ ಸಿ ಬಿ ಏಳು ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿ ಶುಭಾರಂಭ ಮಾಡಿದೆ.
ಮಳೆ ಬರುವ ಆತಂಕದಿಂದಾಗಿ, ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕವರ್‌ಗಳನ್ನು ಹಾಕಲಾಗಿತ್ತು. ಆದರೆ ಈ ಪಂದ್ಯಕ್ಕೆ ಮಳೆ ಅಂತಹ ಅಡ್ಡಿಯನ್ನೇನು ಉಂಟು ಮಾಡಿಲ್ಲ.
Virat Kohli reacted and said “Wait” to a little fan among the packed crowd and then asked the security staff to get the poster and gave his autograph❤️pic.twitter.com/tYIUHPQaN2
— Fearless🦁 (@ViratTheLegend) March 21, 2025