ಬೆಂಗಳೂರು: ನಾವು ಗೌರವಯುತವಾಗಿ ಮುಖ್ಯಮಂತ್ರಿಯವರಿಗೆ ಬೇಡಿಕೆ ಈಡೇರಿಸಿ ಎಂದು ಹೇಳುತ್ತೇವೆ. ನಾವು ಎಲ್ಲೂ ಬಸ್ ಗಳಿಗೆ ಕಲ್ಲು ಹೊಡೆದಿಲ್ಲ. ಬೆಂಕಿ ಹಚ್ಚಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿದ್ದಾರೆ. ಸರ್ಕಾರ ಇದಕ್ಕೆಲ್ಲ ಪರಿಹಾರವನ್ನು ನೀಡಬೇಕು. ಮುಷ್ಕರ ಅಂತ್ಯ ಮಾಡುವುದು ಸರ್ಕಾರದ ಕೈಯಲ್ಲಿದೆ ಎಂದು ಹೇಳಿದ್ದಾರೆ.
ಎಷ್ಟು ಸಾರಿಗೆ ನೌಕರರನ್ನು ವಜಾ ಮಾಡುತ್ತಾರೆ? ಮಾಡಲಿ, ಸಾರಿಗೆ ನೌಕರರು ಅಧಿಕಾರಿಗಳ ಬೆದರಿಕೆಗೆ ಹೆದರಬೇಡಿ. ಸರ್ಕಾರ ಏನು ಮಾಡುತ್ತದೆಯೋ ಮಾಡಲಿ, ನಾವು ಯಾವುದಕ್ಕೂ ಜಗ್ಗುವುದಿಲ್ಲ. ನೌಕರರಿಗೆ ಆರನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸರ್ಕಾರಿ ಬಸ್ ಗಳು ಹೆಚ್ಚಾಗಿ ಓಡಾಡುತ್ತಿಲ್ಲ. ಖಾಸಗಿಯವರಿಂದ ಕೆಲಸ ಮಾಡಿಸುತ್ತಿದ್ದಾರೆ. ಹೆದರಿಸಿ ಬೆದರಿಸಿ ಕೆಲಸ ಮಾಡಿಸುವುದನ್ನು ಬಿಡಬೇಕು ಎಂದು ಹೇಳಿದ್ದಾರೆ.