ಹಾಸನ: ಪ್ರಕೃತಿ ವಿಕೋಪ ಮತ್ತು ರಾಜಕೀಯ ಕುರಿತಾಗಿ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಶುಭಕೃತ ನಾಮ ಸಂವತ್ಸರದ ಫಲವಾಗಿ ಗುಡುಗು, ಮಿಂಚು, ಮಳೆಯ ಮೂಲಕ ಪ್ರಕೃತಿಯಲ್ಲಿ ಅಲ್ಲೋಲಕಲ್ಲೋಲ ಉಂಟಾಗಲಿದೆ. ಮಲೆನಾಡು ಬಯಲು ಸೀಮೆಯಾಗಲಿದ್ದು, ಬಯಲು ಸೀಮೆ ಮಲೆನಾಡು ಆಗಲಿದೆ ಎಂದು ಹೇಳಿದ್ದಾರೆ.
ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡು ಕಂಪಿಸೀತು, ಕೆರೆಕಟ್ಟೆ ಒಡೆದು ಗುಡ್ಡ ಕುಸಿಯಲಿವೆ. ಅಕಾಲಿಕ ಮಳೆಯಿಂದ ಅನಾಹುತ ಉಂಟಾಗಲಿದೆ. ದೇಶಕ್ಕೆ ಕಷ್ಟ ಬರಲಿದೆ. ರೋಗ, ರುಜಿನ ಹೆಚ್ಚಾಗಲಿದೆ. ಕಳ್ಳರ ಕಾಟ, ಗಲಭೆ, ಅಪಮೃತ್ಯು, ರಾಜಕೀಯ ಕಲಹ, ಗೊಂದಲ, ಸಾವು, ನೋವು ಆಗುವ ಲಕ್ಷಣವಿದೆ. ಸಂವತ್ಸರದ ಕೊನೆಯವರೆಗೆ ಈ ಅವಘಡವಿರುತ್ತದೆ ಎಂದು ಹೇಳಿದ್ದಾರೆ.