ಚಿಕ್ಕಬಳ್ಳಾಪುರ: ರಾಜ್ಯಕ್ಕೆ ಗಾಳಿಯಿಂದ ಗಂಡಾಂತರ ಕಾದಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ತಮ್ಮ ನಿಖರವಾದ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಬುದ್ಧಿ ಕಲಿಸಲು ಕೊರೋನಾ ಬಂತು, ಜಲ ಗಂಡಾಂತರ ಕೂಡ ಬಂದು ಹೋಗಿದೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಗಾಳಿಯಿಂದ ಗಂಡಾಂತರ ಕಾದಿದೆ ಎಂದು ಹೇಳಿದ್ದಾರೆ.
ಈ ಗಾಳಿ ಗಂಡಾಂತರ ಮನುಷ್ಯನಿಗೆ ಅಪಾಯ ತರಲಿದೆ. ಗಾಳಿ ಗಂಡಾಂತರ ಹೋಗುವ ಕಾಲಕ್ಕೆ ಬರಗಾಲವನ್ನು ತರಲಿದ್ದು, ತಿನ್ನಲು ಅನ್ನ, ಕುಡಿಯಲು ನೀರು ಇಲ್ಲದಂತಹ ಸ್ಥಿತಿ ಬರಲಿದೆ ಎಂದು ಹೇಳಿದ್ದಾರೆ.
ಈಗಿನ ಸನ್ನಿವೇಶದಲ್ಲಿ ಧರ್ಮದ ಬದಲು ಜಾತಿ ಮಾತನಾಡುತ್ತಿದೆ. ಜಾತಿ ಮಾತನಾಡುವುದರಿಂದ ಮನುಕುಲಕ್ಕೆ ಅಪಾಯವಿದೆ. ಧರ್ಮ ಮಾತನಾಡಿದರೆ ಶಾಂತಿ ನೆಲೆಸುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.