ಕೊಡಗು: ಹೋಂ ಸ್ಟೇನಲ್ಲಿಯೇ ದಂಪತಿ ಹಾಗೂ ಮಗು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ.
ಅರೇಕಾ ಹೋಂ ಸ್ಟೇನಲ್ಲಿ ಮಗುವಿನೊಂದಿಗೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಕೇರಳದ ಕೊಲ್ಲಂ ಮೂಲದ ದಂಪತಿ ಎಂದು ತಿಳಿದುಬಂದಿದೆ.
ಡಿ.8ರಂದು ಸಂಜೆ ಪ್ರವಾಸಕ್ಕೆಂದು ಆಗಮಿಸಿದ ದಂಪತಿ ಹಾಗೂ ಮಗು ಅರೇಕಾ ಹೋಂ ಸ್ಟೇನಲ್ಲಿ ತಂಗಿದ್ದರು. ಇಂದು ಎಷ್ಟು ಹೊತ್ತಾದರೂ ದಂಪತಿ ಹೋಂ ಸ್ಟೇನಿಂದ ಹೊರ ಬಂದಿಲ್ಲ. ಬಾಗಿಲನ್ನು ತೆಗೆಯುತ್ತಿರಲಿಲ್ಲ. ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.
ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೊಲ್ಲಂನಲ್ಲಿರುವ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಕುಟುಂಬದವರು ಬಂದ ಬಳಿಕವೇ ರೂಂ ಬಾಗಿಲು ಓಪನ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.