ಕೊಡಗು: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರಿದ್ದು, ಸೋಂಕು ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮವಾಗಿ ಕೊಡಗು ಹಾಗೂ ಕೇರಳ ನಡುವಿನ ಬಸ್ ಸಂಚಾರ ರದ್ದುಪಡಿಸಲಾಗಿದೆ.
ಈಗಾಗಲೇ ಕೇರಳ, ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವೀಕೆಂಡ್ ಕರ್ಫ್ಯೂ ಕೂಡ ಜಾರಿಯಲ್ಲಿದೆ. ಈ ನಡುವೆ ಕೊಡಗು ಜಿಲ್ಲಾಡಳಿತ ಕೊಡಗು ಹಾಗೂ ಕೇರಳ ನಡುವಿನ ಬಸ್ ಸಂಚಾರವನ್ನು ತಾತ್ಕಾಲಿಕ ಬಂದ್ ಮಾಡಿದೆ.
ಕೊಡಗಿನಿಂದ ಯಾವುದೆ ಬಸ್ ಕೇರಳಕ್ಕೆ ಹಾಗೂ ಕೇರಳದಿಂದ ಕೊಡಗಿಗೆ ಯಾವುದೇ ಬಸ್ ಸಂಚರಿಸದಂತೆ ನಿರ್ಬಂಧ ವಿಧಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ತಿಳಿಸಿದ್ದಾರೆ.