ಮಡಿಕೇರಿ: ವೀರ ಸೇನಾನಿಗಳಿಗೆ ಅಪಮಾನ ಖಂಡಿಸಿ ನಾಳೆ ಕೊಡಗು ಬಂದ್ ಗೆ ಕರೆ ನೀಡಲಾಗಿದೆ. ಕೊಡಗು ಜಿಲ್ಲಾ ಸಮಾನ ಮನಸ್ಕರು ಒಕ್ಕೂಟದಿಂದ ಬಂದ್ ಗೆ ಕರೆ ನೀಡಲಾಗಿದ್ದು, ನಾಳಿನ ಬಂದಿಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ ಸೂಚಿಸಲಾಗಿದೆ.
ಕೊಡಗು ಜಿಲ್ಲೆಯ ಅನುದಾನ ರಹಿತ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಗೆ ಅವಮಾನ ಮಾಡಿರುವುದನ್ನು ಖಂಡಿಸಿ, ಕ್ರಮಕ್ಕೆ ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿದೆ.
ವೀರ ಸೇನಾನಿಗಳಿಗೆ ವಕೀಲ ವಿದ್ಯಾಧರ ಅವರಿಂದ ಅವಮಾನ ಹಿನ್ನೆಲೆಯಲ್ಲಿ ವಿದ್ಯಾಧರ ಅವರ ಗಡಿಪಾರಿಗೆ ಒತ್ತಾಯಿಸಿ ನಾಳೆ ಕೊಡಗು ಬಂದ್ ಗೆ ಕರೆ ನೀಡಲಾಗಿದೆ.