
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಗಿರಿಗೆ ತೆರಳಲು ಬಯಸುವ ಪ್ರವಾಸಿಗರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಭಾರಿ ಮಳೆಯ ಕಾರಣಕ್ಕೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಹಿಂದೆ ವಿಧಿಸಿದ್ದ ಪ್ರವೇಶ ನಿರ್ಬಂಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ.
ಪ್ರವಾಸಿಗರ ಒತ್ತಡಕ್ಕೆ ಮಣಿದು ವನ್ಯಜೀವಿ ಇಲಾಖೆ, ಈ ತೀರ್ಮಾನ ಕೈಗೊಂಡಿದ್ದು, ಭಾನುವಾರದಿಂದಲೇ ಕೊಡಚಾದ್ರಿ ಗಿರಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ವಾಹನದಲ್ಲಿ ಮಾತ್ರ ತೆರಳಲು ಅವಕಾಶ ನೀಡಲಾಗಿದ್ದು, ಜೀಪ್ ಪ್ರವೇಶಕ್ಕೆ ಕೆಲವು ಷರತ್ತು ವಿಧಿಸಲಾಗಿದೆ.
ಕೊಡಚಾದ್ರಿ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ಜೀಪ್ ಮಾಲೀಕರು ಹಾಗೂ ಪ್ರವಾಸಿಗರು ಮುಚ್ಚಳಿಕೆ ಬರೆದು ಕೊಡಬೇಕಾಗಿದ್ದು, ಯಾವುದೇ ತೆರನಾದ ಅಪಾಯ ಉಂಟಾದರೆ ಅದಕ್ಕೆ ನಾವೇ ಜವಾಬ್ದಾರರು ಎಂದು ಇದರಲ್ಲಿ ನಮೂದಿಸಬೇಕಾಗುತ್ತದೆ. ಅಲ್ಲದೆ ಜೀಪ್ ನಲ್ಲಿ ಮಾತ್ರ ತೆರಳಬಹುದಾಗಿದ್ದು, ಚಾರಣಕ್ಕೆ ಅವಕಾಶ ನಿರಾಕರಿಸಲಾಗಿದೆ.