ಕೊಚ್ಚಿ: ಅತ್ಯಾಚಾರಕ್ಕೊಳಗಾದ ಬಾಲಕಿ ಆಸ್ಪತ್ರೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದು, ಅಕಾಲಿಕ ಶಿಶುವನ್ನು ಫ್ಲಶ್ ಮಾಡಿ ಕೆಳಗೆ ಹರಿಯುವಂತೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ಇನ್ನೊಬ್ಬ ರೋಗಿಯು ವಾಶ್ ರೂಮ್‌ಗೆ ಹೋದ ನಂತರ ಅಲ್ಲಿ ಅಕಾಲಿಕವಾಗಿ ಜನಿಸಿದ ಭ್ರೂಣದ ಅವಶೇಷಗಳನ್ನು ಕಂಡು ಆಸ್ಪತ್ರೆಯವರಿಗೆ ಮಾಹಿತಿ ನೀಡಿದ್ದಾರೆ.
ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಯ ವಾಶ್‌ರೂಂ ಒಳಗೆ ಅಕಾಲಿಕ ಮಗುವನ್ನು ಹೆತ್ತ ಹುಡುಗಿ ನವಜಾತ ಶಿಶುವನ್ನು ಕೆಳಕ್ಕೆ ಎಸೆದು ನೀರು ಹರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕಿಯ ಮೇಲೆ 20 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ. ಲೈಂಗಿಕ ದೌರ್ಜನ್ಯದಿಂದ ಆಕೆ ಗರರ್ಭಿಣಿಯಾಗಿದ್ದಾಳೆ. ಬುಧವಾರ, ಆಕೆ ತನ್ನ ತಾಯಿಯೊಂದಿಗೆ ತಪಾಸಣೆಗಾಗಿ ಕೊಚ್ಚಿಯ ಖಾಸಗಿ ವೈದ್ಯಕೀಯ ಸೌಲಭ್ಯಕ್ಕೆ ಹೋಗಿದ್ದಾಳೆ.
ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾಯುತ್ತಿರುವಾಗ ಸಣ್ಣ ನೋವು ಕಾಣಿಸಿಕೊಂಡು ಅವಳು ವಾಶ್ ರೂಮ್‌ಗೆ ಹೋಗಿದ್ದು, ಅಲ್ಲಿ ಅಕಾಲಿಕ ಮಗುವಿಗೆ ಜನ್ಮ ನೀಡಿದ್ದಾಳೆ. ಅವಳು ನವಜಾತ ಶಿಶುವನ್ನು ಕೆಳಕ್ಕೆ ತಳ್ಳಿ ನೀರು ಹರಿಸಿ ಹೊರಗೆ ಬಂದಿದ್ದಾಳೆ. ಸ್ಕ್ಯಾನಿಂಗ್ ರೂಮ್ ಗೆ ಮರಳಿದ ಅವಳು ಮಗುವಿಗೆ ಜನ್ಮ ನೀಡಿದ್ದನ್ನು ಬಹಿರಂಗಪಡಿಸಲಿಲ್ಲ.
ಇನ್ನೊಬ್ಬ ರೋಗಿ ಶೌಚಾಲಯಕ್ಕೆ ಹೋದ ನಂತರ ಭ್ರೂಣದ ಅವಶೇಷಗಳನ್ನು ಕಂಡು ಮಾಹಿತಿ ನೀಡಿದ್ದಾರೆ.. ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಅಕಾಲಿಕವಾಗಿ ಜನಿಸಿದ ಮಗುವನ್ನು ಕೆಳಕ್ಕೆ ಹಾಕಿ ನೀರು ಹರಿಸಿದ್ದಾಗಿ ಹುಡುಗಿ ಒಪ್ಪಿಕೊಂಡಿದ್ದಾಳೆ.
20 ವರ್ಷದ ಯುವಕನಿಂದ ಅತ್ಯಾಚಾರಕ್ಕೊಳಗಾದ ನಂತರ ಗರ್ಭಿಣಿಯಾಗಿದ್ದಾಗಿ ಎಂದು ಬಾಲಕಿ ಹೇಳಿದ್ದಾಳೆ. ಆಕೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ, ವಯನಾಡ್ ಮೂಲದ ಆರೋಪಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.