ಹೋಟೆಲ್ ಕೊಠಡಿಗಳಲ್ಲಿ ಹಿಡನ್ ಕ್ಯಾಮೆರಾ ಇರುವುದು ಹೊಸ ವಿಷಯವಲ್ಲ. ಅದರಲ್ಲೂ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುವಾಗ ಹೆಚ್ಚು ಎಚ್ಚರಕೆಯಿಂದಿರಬೇಕು. ಯಾವುದಾದರೂ ಮೂಲೆಯಲ್ಲಿರುವ ಕಳ್ಳ ಕಣ್ಣು ನಿಮ್ಮನ್ನು ನೋಡ್ತಿರುತ್ತದೆ. ಹೊಟೇಲ್ ರೂಮಿನಲ್ಲಿ ಕ್ಯಾಮರಾ ಇದ್ಯಾ ಎಂಬುದನ್ನು ಸಿಂಪಲ್ ಟ್ರಿಕ್ ಮೂಲಕ ಕಂಡು ಹಿಡಿಯಬಹುದು.
ಹೊಟೇಲ್ ಕೋಣೆ ಪ್ರವೇಶಿಸಿದಾಗ, ಕೋಣೆಯ ಸುತ್ತಲೂ ನೋಡಿ. ಸ್ಪೈ ಕ್ಯಾಮರಾಗಳನ್ನ ಅಡಗಿಸಿಟ್ಟಿದ್ದಾರ ಎಂದು ಅಲ್ಲೆಲ್ಲ ತಡಕಾಡಿ. ಯಾವುದಾದರೂ ವಿಚಿತ್ರ ಸಾಧನ ಕಣ್ಣಿಗೆ ಬಿದ್ದರೆ, ಹೋಟೆಲ್ ಸಿಬ್ಬಂದಿ ಅಥವಾ ವ್ಯವಸ್ಥಾಪಕರಿಗೆ ಕರೆ ಮಾಡಿ. ವಾಸ್ತವವಾಗಿ, ಹೋಟೆಲ್‌ನಲ್ಲಿ ಹಿಡನ್ ಕ್ಯಾಮೆರಾದ ಗಾತ್ರವು ತುಂಬಾ ಚಿಕ್ಕದಾಗಿರುತ್ತೆ. ಅವುಗಳನ್ನು ಎಲ್ಲಿಯಾದರೂ ಅಡಗಿಸಿಡಬಹುದು.
ನಿವೃತ್ತಿ ಬಳಿಕ ಮಾಸಿಕ 2 ಲಕ್ಷ ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ
ಹೆಚ್ಚಿನ ಕ್ಯಾಮೆರಾ ಲೆನ್ಸ್ ಗಳು ಬೆಳಕನ್ನು ಪ್ರತಿಬಿಂಬಿಸುವ ಹಾಗೆ ಮಾಡುತ್ತೆ. ಕೋಣೆಯಲ್ಲಿ ಅಡಗಿರುವ ಕ್ಯಾಮೆರಾ ಕೂಡ ಬೆಳಕನ್ನು ಪ್ರತಿಫಲಿಸುತ್ತದೆ. ಕೋಣೆಯ ದೀಪಗಳನ್ನು ಆಫ್ ಮಾಡಿ, ಕತ್ತಲು ಮಾಡಿ. ನಂತರ ಮೊಬೈಲ್ ಫ್ಲ್ಯಾಶ್‌ಲೈಟ್‌ನೊಂದಿಗೆ ಇಡೀ ಕೊಠಡಿಯನ್ನು ನೋಡಿ. ಎಲ್ಲೋ ಪ್ರತಿಫಲನವಿದ್ದರೆ, ತಕ್ಷಣವೇ ಆ ಸ್ಥಳವನ್ನು ಪರೀಕ್ಷಿಸಿ.
ಕೋಣೆಯಲ್ಲಿ ಯಾವುದೇ ವಿಚಿತ್ರವಾದ ವಸ್ತುಗಳನ್ನ ನೋಡಿದರೆ, ತಕ್ಷಣವೇ ಅವುಗಳನ್ನು ಟವಲ್ ನಿಂದ ಮುಚ್ಚಿ. ಬೀರುವಿನಲ್ಲಿ ಇಟ್ಟು ಮುಚ್ಚಿಡಿ.
ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬಹಳ ಮುಂದುವರಿದಿದೆ. ಇಂತಹ ಸ್ಪೈ ಕ್ಯಾಮೆರಾ ಡಿಟೆಕ್ಟರ್ ಇರುವಂತಹ ಮೊಬೈಲ್ ಆಪ್‌ಗಳು ಸಿಗುತ್ತೆ. ಅಂತಹ ಆ್ಯಪ್ ಗಳನ್ನ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ. ಇದರ ಸಹಾಯದಿಂದ ಕೊಠಡಿಯಲ್ಲಿ ಹಿಡನ್ ಕ್ಯಾಮೆರಾವನ್ನು ಹುಡುಕಬಹುದು.