ಬೆಳಿಗ್ಗೆ ಕಣ್ಣು ತೆರೆದ ನಂತ್ರ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ನಾವು ಮಾತನಾಡ್ತಿರುತ್ತೇವೆ. ಕುಟುಂಬದ ಜೊತೆ, ಸ್ನೇಹಿತರ ಜೊತೆ, ಗ್ರಾಹಕರ ಜೊತೆ, ಸಹೋದ್ಯೋಗಿಗಳ ಜೊತೆ ಮಾತನಾಡ್ತಿರುತ್ತೇವೆ. ದಿನದಲ್ಲಿ ಎಷ್ಟು ಬಾರಿ ಮಾತನಾಡ್ತೆವೆ ಎನ್ನುವ ಬಗ್ಗೆ ಯಾರೂ ಆಲೋಚನೆ ಮಾಡುವುದಿಲ್ಲ.
ಪ್ರತಿಯೊಬ್ಬರ ಮಾತನಾಡುವ ಪ್ರವೃತ್ತಿ ಬೇರೆಬೇರೆಯಾಗಿರುತ್ತದೆ. ಕೆಲವರು ಕಡಿಮೆ ಮಾತನಾಡಿದ್ರೆ ಮತ್ತೆ ಕೆಲವರು ಹೆಚ್ಚು ಮಾತನಾಡ್ತಾರೆ. ಲಿಂಕ್ಡ್ಇನ್ ಲರ್ನಿಂಗ್ ಬೋಧಕ ಜೆಫ್ ಆನ್ಸೆಲ್ ರಿಸರ್ಚ್ ಪ್ರಕಾರ, ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ದಿನಕ್ಕೆ ಕನಿಷ್ಠ 7000 ಪದಗಳನ್ನು ಮಾತನಾಡುತ್ತಾನೆ. ಅನೇಕ ಜನರು ಇದಕ್ಕಿಂತ ಹೆಚ್ಚು ಪದಗಳನ್ನು ಮಾತನಾಡುತ್ತಾರೆ.
ಒಬ್ಬ ವ್ಯಕ್ತಿಯ ತನ್ನ ಇಡೀ ಜೀವನದಲ್ಲಿ ಸರಾಸರಿ 860,341,500 ಪದಗಳನ್ನು ಮಾತನಾಡುತ್ತಾನೆ. ಇಡೀ ಜೀವನದಲ್ಲಿ 86 ಕೋಟಿ ಪದಗಳನ್ನು ಮಾತನಾಡಲು ನಿಮ್ಮ ಶಕ್ತಿಯನ್ನು ವ್ಯಯಿಸುತ್ತೀರಿ. ಬ್ರಿಟಿಷ್ ಬರಹಗಾರ ಮತ್ತು ಪ್ರಸಾರಕರಾದ ಗೈಲ್ಸ್ ಬ್ರಾಂಡ್ರೆತ್ ಅವರು ತಮ್ಮ ಪುಸ್ತಕ ದಿ ಜಾಯ್ ಆಫ್ ಲೆಕ್ಸ್: ಹೌ ಟು ಹ್ಯಾವ್ ಫನ್ ನಲ್ಲಿ 860,341,500 ಪದಗಳನ್ನು ಮಾತನಾಡುವ ಮಾಹಿತಿ ನೀಡಿದ್ದಾರೆ.