ಕೆಲವೊಮ್ಮೆ ಯಾರಾದ್ರೂ ನಮ್ಮನ್ನ ಮುಟ್ಟಿದ್ರೆ, ಅಥವಾ ನಾವೇನಾದ್ರೂ ವಸ್ತು ಮುಟ್ಟಿದ್ರೆ, ಇದ್ದಕ್ಕಿದ್ದ ಹಾಗೆ ಶಾಕ್ ಹೊಡೆಯುತ್ತೆ. ಇದು ಯಾಕೆ ಅಂತ ನಿಮಗೆ ಗೊತ್ತಾ? ಇದು ಯಾಕೆ ಆಗುತ್ತೆ ಅಂತ ನೋಡೋಣ.
ನಮ್ಮ ದೇಹದಲ್ಲಿ ನರಗಳು ವಿದ್ಯುತ್ ಚಟುವಟಿಕೆ ಮಾಡ್ತಿರ್ತವೆ. ನಮ್ಮ ಮನೆಯಲ್ಲಿ ಕರೆಂಟ್ ತಂತಿಗಳ ಮೇಲೆ ಪ್ಲಾಸ್ಟಿಕ್ ಕವರ್ ಇರೋ ಹಾಗೆ, ನಮ್ಮ ದೇಹದ ನರಗಳ ಮೇಲೆ ಮೈಲಿನ್ ಕವಚ ಅನ್ನೋ ರಕ್ಷಣಾ ಕವಚ ಇರುತ್ತೆ. ಇದು ನರಗಳಲ್ಲಿ ಕರೆಂಟ್ ಸಲೀಸಾಗಿ ಪಾಸ್ ಆಗೋಕೆ ಸಹಾಯ ಮಾಡುತ್ತೆ.
ನಾವು ತುಂಬಾ ಹೊತ್ತು ಒಂದೇ ಕಡೆ ಕೂತಾಗ, ನಮ್ಮ ನರಗಳಲ್ಲಿ ಬ್ಯಾಲೆನ್ಸ್ ತಪ್ಪುತ್ತೆ. ಇದರಿಂದ ದೇಹದಲ್ಲಿ ಎಲೆಕ್ಟ್ರಾನ್ ಗಳು ಸರಿಯಾಗಿ ಓಡಾಡಲ್ಲ. ಯಾರಾದ್ರೂ ನಮ್ಮನ್ನ ಮುಟ್ಟಿದ್ರೆ, ಆ ಮೈಲಿನ್ ಕವಚ ಆಕ್ಟಿವ್ ಆಗುತ್ತೆ, ಆಗ ನಮಗೆ ಶಾಕ್ ಹೊಡೆದ ಹಾಗೆ ಆಗುತ್ತೆ.
ಇದು ಮನೆ, ಆಫೀಸ್ ಗಳಲ್ಲಿ ಜಾಸ್ತಿ ಆಗುತ್ತೆ. ಯಾಕಂದ್ರೆ, ನಾವು ಪ್ಲಾಸ್ಟಿಕ್ ಕುರ್ಚಿ ಮೇಲೆ ಕೂತಾಗ ನಮ್ಮ ದೇಹದಲ್ಲಿ ಕರೆಂಟ್ ಚಾರ್ಜ್ ಆಗುತ್ತೆ. ನಮ್ಮ ಕಾಲು ನೆಲಕ್ಕೆ ತಾಗದಿದ್ದರೆ, ಎಲೆಕ್ಟ್ರಾನ್ ಗಳು ಸರಿಯಾಗಿ ಹೊರಗೆ ಹೋಗಲ್ಲ. ಸಿಂಥೆಟಿಕ್ ಬಟ್ಟೆಗಳು, ಪ್ಲಾಸ್ಟಿಕ್ ಕುರ್ಚಿಗಳ ಮೇಲೆ ಉಜ್ಜಿದಾಗ ಕರೆಂಟ್ ಚಾರ್ಜ್ ಆಗುತ್ತೆ.
ಪ್ಲಾಸ್ಟಿಕ್ ಕರೆಂಟ್ ಅನ್ನು ಸರಿಯಾಗಿ ಪಾಸ್ ಮಾಡಲ್ಲ, ಅದಕ್ಕೆ ನಮ್ಮ ಬಟ್ಟೆಗಳಿಂದ ಚಾರ್ಜ್ ಅನ್ನು ಸಂಗ್ರಹಿಸುತ್ತೆ. ನಾವು ಎದ್ದಾಗ, ಈ ಚಾರ್ಜ್ ಕುರ್ಚಿಗೆ ವಾಪಸ್ ಹೋಗುತ್ತೆ, ಆಗ ನಾವು ಕುರ್ಚಿಯನ್ನು ಮುಟ್ಟಿದರೆ, ನಮಗೆ ಲೈಟಾಗಿ ಶಾಕ್ ಹೊಡೆಯುತ್ತೆ.
ಸಾಮಾನ್ಯವಾಗಿ ಇದು ಡೇಂಜರ್ ಅಲ್ಲ. ಆದ್ರೆ, ಪದೇ ಪದೇ ಈ ರೀತಿ ಆಗ್ತಿದ್ರೆ, ಡಾಕ್ಟರ್ ಹತ್ರ ಹೋಗಿ ಚೆಕ್ ಮಾಡಿಸೋದು ಒಳ್ಳೆಯದು. ಇದು ನಮ್ಮ ದೇಹದ ನರಗಳ ಕೆಲಸದಿಂದ ಆಗೋದು. ಇದನ್ನ ತಿಳ್ಕೊಂಡ್ರೆ ಭಯ ಪಡೋದು ತಪ್ಪುತ್ತೆ.