ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತದೆ. ಆಗ ಮನೆ ಸ್ವಚ್ಛ ಮಾಡಿ ಮನೆಯಲ್ಲಿರುವ ಕೆಲ ವಸ್ತುಗಳನ್ನು ಹೊರ ಹಾಕದೆ ಇದ್ರೆ ಇಂದೇ ಮನೆಯಲ್ಲಿರುವ ಈ ವಸ್ತುಗಳನ್ನು ಆಚೆ ಹಾಕಿ.
ನಿಧಾನವಾಗಿ ಬದಲಾವಣೆ ಕಾಣಲು ಶುರುವಾಗುತ್ತದೆ. ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ.
ಹಬ್ಬಕ್ಕೂ ಮುನ್ನ 6.5 ಕೋಟಿ ಪಿಎಫ್ ಖಾತೆದಾರರಿಗೆ ಸಿಕ್ಕಿದೆ ಖುಷಿ ಸುದ್ದಿ…..!
ನೀವು ಬಳಕೆ ಮಾಡದ ಹಳೆಯ ಚಪ್ಪಲಿ-ಬೂಟುಗಳನ್ನು ಮನೆಯಿಂದ ಹೊರಗೆ ಹಾಕಿ. ಹಳೆ ಚಪ್ಪಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಮೆಟ್ಟಿಲ ಕೆಳಗಿರುವ ಜಾಗವನ್ನು ಹಾಳು ಮಾಡದಂತೆ ಅಲ್ಲಿ ಕಪಾಟು ನಿರ್ಮಾಣ ಮಾಡಿರುತ್ತಾರೆ. ಸಾಮಾನ್ಯವಾಗಿ ಮೆಟ್ಟಿಲ ಕೆಳಗಿರುವ ಕಪಾಟಿನಲ್ಲಿ ಹಳೆಯ ವಸ್ತು, ರದ್ದಿ, ಪೇಪರ್ ಗಳನ್ನು ಇಡಲಾಗುತ್ತದೆ. ವಾಸ್ತು ಪ್ರಕಾರ ಅದು ತಪ್ಪು. ಹಾಗಾಗಿ ಮೆಟ್ಟಿಲ ಕೆಳಗಿರುವ ಜಾಗವನ್ನು ಸದಾ ಸ್ವಚ್ಛವಾಗಿಡಿ.
ʼಮಾನ್ಸೂನ್ʼ ಮುಗಿದರೂ ಈ ಪ್ರಮಾಣದಲ್ಲಿ ಮಳೆಯಾಗುತ್ತಿರುವುದೇಕೆ…?
ಗಡಿಯಾರ ನಿಮ್ಮ ಪ್ರಗತಿಯ ಸಂಕೇತ. ಆದ್ರೆ ಮನೆಯಲ್ಲಿರುವ ಹಾಳಾದ ಗಡಿಯಾರ ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ. ಹಾಗಾಗಿ ಹಳೆ ಗಡಿಯಾರವನ್ನು ಮನೆಯಿಂದ ಹೊರಗೆ ಹಾಕಿ.
ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಆರೋಗ್ಯ ಹಾಗೂ ಆರ್ಥಿಕ ವೃದ್ಧಿ ಮೇಲೆ ಇದು ಪರಿಣಾಮ ಬೀರುತ್ತದೆ.
ಬೇಡದ ವಸ್ತುಗಳನ್ನು ಅಟ್ಟಕ್ಕೇರಿಸುವ ಪದ್ಧತಿ ಅನೇಕರಲ್ಲಿದೆ. ಆದ್ರೆ ಇದು ಅಭಿವೃದ್ಧಿಗೆ ಅಡ್ಡಿಯುಂಟು ಮಾಡುತ್ತದೆ.
ಒಡೆದ ಗಾಜಿನ ವಸ್ತು, ಹಾಳಾದ, ಬಳಸದ ಪಾತ್ರೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ.
ಬಟ್ಟೆ ಚಿಕ್ಕದಾಗಿದ್ದು, ಅನೇಕ ದಿನಗಳಿಂದ ಅದನ್ನು ಬಳಸುತ್ತಿಲ್ಲವೆಂದಾದ್ರೆ ಅವಶ್ಯವಿರುವ ಜನರಿಗೆ ದಾನ ಮಾಡುವುದು ಒಳ್ಳೆಯದು.