ಟ್ಯಾಟೂ ಹಾಕಿಸಿಕೊಳ್ಳುವುದು ಎಂದರೆ ನಿಮಗೆ ಬಲು ಇಷ್ಟವೇ? ನಿಮ್ಮದು ಸೂಕ್ಷ್ಮ ಪ್ರಕಾರದ ತ್ವಚೆ ಎಂಬುದು ಗೊತ್ತಿದ್ದರೂ ಟ್ಯೂಟೂ ಆಕರ್ಷಣೆಯಿಂದ ಹೊರ ಬರಲು ಆಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ…..
ಟ್ಯಾಟೂ ತ್ವಚೆಯ ಬೆವರು ಗ್ರಂಥಿಗಳಿಗೆ ಹಾನಿಯುಂಟು ಮಾಡುತ್ತದೆ. ಇವು ದೇಹವನ್ನು ತಂಪಾಗಿಡುವ ಬದಲು ಮತ್ತಷ್ಟು ಬಿಸಿಯಾಗಲು ಕಾರಣವಾಗಬಹುದು. ದೇಹದ ತಾಪಮಾನ ನಿಯಂತ್ರಣದಲ್ಲಿರಲು ಬೆವರುವುದು ಅತ್ಯಗತ್ಯ. ಆದರೆ ನಿಮ್ಮ ಟ್ಯಾಟೋ ಈ ಗ್ರಂಥಿಗಳನ್ನು ಮುಚ್ಚಿಬಿಡಬಹುದು.
ಟ್ಯಾಟೂ ಕೆಲವರಿಗೆ ಅಲರ್ಜಿಗೆ ಕಾರಣವಾಗಬಹುದು, ತುರಿಕೆ ಕಾಣಿಸಿಕೊಂಡು ದೇಹದಲ್ಲೆಲ್ಲಾ ಬೊಬ್ಬೆಗಳು ಮೂಡಬಹುದು. ಹಾಗಾಗಿ ನಿಮ್ಮ ತ್ವಚೆಗೆ ಟ್ಯಾಟೋ ಹೊಂದಿಕೊಳ್ಳುತ್ತದೆಯೋ ಇಲ್ಲವೋ ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ.
ಟ್ಯಾಟೂಗೆ ಬಳಸುವ ಕಾಸ್ಮೆಟಿಕ್ ಗಳು ದೀರ್ಘ ಕಾಲದವರೆಗೆ ಪರಿಣಾಮ ಬೀರುವಂಥವು. ಅವುಗಳ ಗುಣಮಟ್ಟದ ಮೇಲೆ ಗಮನವಿರಲಿ. ಫ್ಯಾಶನ್ ಎಂಬ ಕಾರಣಕ್ಕೆ ಕಿರಿಕಿರಿಯನ್ನು ಮೈಮೇಲೆ ಎಳೆದುಕೊಂಡಂತಾಗದಿರಲಿ.