ಕಾರುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮೇಲೆ ಟೈರ್‌ಗಳು ಪರಿಣಾಮ ಬೀರುತ್ತವೆ. ಉತ್ತಮ ಗುಣಮಟ್ಟದ ಟೈರ್‌ಗಳನ್ನು ಅಳವಡಿಸಿದ್ದರೆ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಚೆನ್ನಾಗಿರುತ್ತದೆ. ಆದರೆ ಕಾರಿನ ಟೈರ್‌ಗಳೇ ಕಳಪೆಯಾಗಿದ್ದರೆ ಅಂತಹ ಕಾರಿನಲ್ಲಿ ಪ್ರಯಾಣಿಸುವುದು ಸೇಫಲ್ಲ.
ಮಾರುಕಟ್ಟೆಯಲ್ಲಿ ಹಲವು ಬಗೆಯ ಟೈರ್‌ಗಳು ಲಭ್ಯವಿವೆ. ಪ್ರತಿಯೊಂದು ರೀತಿಯ ಟೈರ್ ಅನ್ನು ನಿರ್ದಿಷ್ಟ ಅಗತ್ಯತೆಗಳು ಮತ್ತು ಚಾಲನಾ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನವರಿಗೆ ಯಾವ ರೀತಿಯ ಟೈರ್‌ಗಳು ಉತ್ತಮ ಅನ್ನೋದು ತಿಳಿದಿಲ್ಲ. ಕಾರು ಖರೀದಿಸುವ ಮುನ್ನ ಟೈರ್‌ಗಳ ಬಗ್ಗೆ ಕೂಡ ವಿವರವಾಗಿ ತಿಳಿದುಕೊಳ್ಳಬೇಕು.
ಆಲ್ ಸೀಸನ್ ಟೈರ್‌ಗಳು: ಎಲ್ಲಾ ಸೀಸನ್ ಟೈರ್‌ಗಳು ಪ್ರತಿ ಋತುವಿನಲ್ಲೂ ಸೂಕ್ತವಾಗಿರುತ್ತವೆ. ವರ್ಷಪೂರ್ತಿ ಇವು ಉತ್ತಮ ಹಿಡಿತ ಮತ್ತು ಕಾರ್ಯಕ್ಷಮತೆ ಹೊಂದಿರಬೇಕೆಂದು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.
ಸಮ್ಮರ್ ಟೈರ್: ಬೇಸಿಗೆಯ ಟೈರ್‌ಗಳನ್ನು ಬಿಸಿ ವಾತಾವರಣದಲ್ಲಿ ಉತ್ತಮ ಕಾರ್ಯಕ್ಷಮತೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ಟೈರ್‌ಗಳು ಹೆಚ್ಚಿನ ತಾಪಮಾನದಲ್ಲಿಯೂ ಉತ್ತಮ ಹಿಡಿತ ಮತ್ತು ಕಾರ್ಯಕ್ಷಮತೆಯನ್ನು ನೀಡುತ್ತವೆ.
ವಿಂಟರ್ ಟೈರ್‌ಗಳು: ಚಳಿಗಾಲದ ಟೈರ್‌ಗಳನ್ನು ಶೀತ ಹವಾಮಾನಕ್ಕೆ ತಕ್ಕಂತೆ ತಯಾರಿಸಲಾಗುತ್ತದೆ. ಇದು ಭಯಂಕರ ಚಳಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು. ಈ ಟೈರ್‌ಗಳು ಹಿಮದಲ್ಲಿಯೂ ಉತ್ತಮ ಹಿಡಿತವನ್ನು ನೀಡುತ್ತವೆ.
ಆಲ್-ಟೆರೈನ್ ಟೈರ್: ಆಲ್-ಟೆರೈನ್ ಟೈರ್‌ಗಳು ಎಲ್ಲಾ ಭೂಪ್ರದೇಶಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸುವ ಟೈರ್‌ಗಳಾಗಿವೆ. ಹೈವೇ, ಮಡ್ ರೋಡ್ ಹೀಗೆ ಎಲ್ಲಾ ಭಾಗದಲ್ಲಿಯೂ ಈ ಟೈರ್‌ಗಳು ಚೆನ್ನಾಗಿ ಓಡಬಲ್ಲವು.
ಆಫ್-ರೋಡ್ ಟೈರ್: ಆಫ್-ರೋಡ್ ಟೈರ್‌ಗಳನ್ನು ನಿರ್ದಿಷ್ಟವಾಗಿ ಆಫ್-ರೋಡಿಂಗ್ ವಾಹನಗಳು ಮತ್ತು ಸ್ಪೋರ್ಟ್ಸ್ ವೆಹಿಕಲ್‌ಗಳಿಗಾಗಿಯೇ ತಯಾರಿಸಲಾಗುತ್ತದೆ. ಇದು ಗುಡ್ಡಗಾಡು ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ರನ್-ಫ್ಲಾಟ್ ಟೈರ್: ರನ್-ಫ್ಲಾಟ್ ಟೈರ್‌ಗಳ ವಿಶೇಷತೆಯೆಂದರೆ ಅವು ಸಂಪೂರ್ಣವಾಗಿ ಪಂಕ್ಚರ್ ಆಗಿದ್ದರೂ ಕಾರಿನ ಚಾಲನೆಯನ್ನು ಮುಂದುವರಿಸಬಹುದು. ಇವು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.
ಈ ಎಲ್ಲಾ ಬಗೆಯ ಟೈರ್‌ಗಳ ಹೊರತಾಗಿಯೂ ಮಾರುಕಟ್ಟೆಯಲ್ಲಿ ಹಲವು ಬಗೆಯ ಟೈರ್‌ಗಳಿವೆ. ಕಾರು ಕೊಂಡುಕೊಳ್ಳುವಾಗ ನಿಮ್ಮ ಅಗತ್ಯತೆಗಳು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಪರಿಗಣಿಸಿಯೇ ಖರೀದಿ ಮಾಡಬೇಕು.