1664ರಲ್ಲಿ ಲಂಡನ್ನಿನಲ್ಲಿ ಪ್ಲೇಗ್ ಪಿಡುಗಿನಿಂದ ಪ್ರತಿಯೊಂದು ಮನೆಯಲ್ಲೂ ಒಬ್ಬರಾದರೂ ಸಾವನ್ನಪ್ಪಿದ್ದರಂತೆ. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಅಂಗಡಿಗಳಲ್ಲಿದ್ದವರು ಮಾತ್ರ ಇದರಿಂದ ಸುರಕ್ಷಿತವಾಗಿದ್ದರು ಎಂಬ ಉಲ್ಲೇಖವಿದೆ. ಅಂದರೆ ಈರುಳ್ಳಿಗೆ ಅಷ್ಟೊಂದು ರೋಗನಿರೋಧಕ ಶಕ್ತಿ ಇದೆಯಂತಾಯಿತಲ್ಲವೆ.
ಮಧ್ಯಪ್ರದೇಶದಲ್ಲಿ ಜನರು ಸನ್ ಸ್ಟ್ರೋಕ್ ನಿಂದ ರಕ್ಷಿಸಿಕೊಳ್ಳಲು ಜೇಬಿನಲ್ಲಿ ಈರುಳ್ಳಿ ಇಟ್ಟುಕೊಳ್ಳುತ್ತಾರಂತೆ.
ರೋಗಿಯ ಹತ್ತಿರದಲ್ಲಿ ಈರುಳ್ಳಿಯನ್ನು ಸುಟ್ಟರೆ ಅದರ ಘಾಟು ವಾಸನೆಗೆ ಇನ್ಫೆಕ್ಷನ್ ಆಗುವುದಿಲ್ಲ.
ಹಿಮ್ಮಡಿ ಒಡೆತಕ್ಕೆ ಈರುಳ್ಳಿ ರಸವನ್ನು ಹಚ್ಚಬೇಕು. ಈರುಳ್ಳಿ ಕುಟ್ಟಿ ಹಚ್ಚಿದರೂ ಉತ್ತಮ.
ಈರುಳ್ಳಿಯ ರಸದಲ್ಲಿ ಬೆವರನ್ನುಂಟು ಮಾಡುವ ಗುಣವು ಹೆಚ್ಚಾಗಿರುತ್ತದೆ. ಇದರ ರಸವು ಮಲಬದ್ಧತೆ, ಕೆಮ್ಮಿಗೆ ವಿಶೇಷ ಗುಣಕಾರಿಯಾಗಿದೆ.
ಕಾಲರಾ ರೋಗ ಹಬ್ಬುತ್ತಿರುವಾಗ ಅದನ್ನು ತಡೆಗಟ್ಟಲು ಈರುಳ್ಳಿಯನ್ನು ಹೆಚ್ಚಾಗಿ ಬಳಸಬೇಕು.
ಚೇಳು, ಜೇನುಹುಳು, ಕಟ್ಟಿರುವೆ ಕಚ್ಚಿದ ಜಾಗಕ್ಕೆ ಈರುಳ್ಳಿ ರಸ ಹಚ್ಚಿದರೆ ನೋವು ಶಮನವಾಗುತ್ತದೆ.