ಅನವಶ್ಯಕ ಕೂದಲು ಮಹಿಳೆಯರ ದೊಡ್ಡ ಸಮಸ್ಯೆ. ಪದೇ ಪದೇ ವ್ಯಾಕ್ಸಿಂಗ್ ಮಾಡುವುದು ಆಗದ ಮಾತು. ಕೂದಲು ಚಿಕ್ಕಚಿಕ್ಕದಿದ್ದಲ್ಲಿ ವ್ಯಾಕ್ಸಿಂಗ್ ಮಾಡುವುದೂ ಕಷ್ಟ. ಮಳೆಗಾಲದಲ್ಲಿ ವ್ಯಾಕ್ಸಿಂಗ್ ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.
ಹಾಗೆ ವ್ಯಾಕ್ಸಿಂಗ್ ನೋವನ್ನು ಅನೇಕ ಹುಡುಗಿಯರು ಸಹಿಸಿಕೊಳ್ಳುವುದಿಲ್ಲ. ಆಗ ಹುಡುಗಿಯರ ಕಣ್ಣಿಗೆ ಬೀಳುವುದು ಹೇರ್ ರಿಮೂವರ್. ನೋವಿಲ್ಲದೆ ಕೂದಲು ತೆಗೆಯಲು ಹೇರ್ ರಿಮೂವರ್ ಬೆಸ್ಟ್. ಆದ್ರೆ ಅದ್ರಲ್ಲೂ ಅಡ್ಡ ಪರಿಣಾಮಗಳಿವೆ.
ಮಹಿಳೆಯರ ಕೂದಲು ಸಂವೇದನಾಶೀಲವಾಗಿರುತ್ತದೆ. ಹೇರ್ ರಿಮೂವರ್ ಬಳಸಿದ್ರೆ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ನಿಮ್ಮ ಚರ್ಮ ತುಂಬಾ ಸಂವೇದನಾಶೀಲವಾಗಿದ್ದರೆ ಮೂರರಿಂದ ನಾಲ್ಕು ಗಂಟೆ ಉರಿಯಾಗುತ್ತದೆ. ಇದ್ರಿಂದ ತಪ್ಪಿಸಿಕೊಳ್ಳಲು ತಣ್ಣನೆಯ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ.
ಹೇರ್ ರಿಮೂವರ್ ಬಳಸಿದ ತಕ್ಷಣ ದಟ್ಟ ಬಿಸಿಲಿಗೆ ಹೋಗಬೇಡಿ. ಇದ್ರಿಂದ ಸನ್ ಬರ್ನ್ ಆಗುವ ಸಾಧ್ಯತೆ ಜಾಸ್ತಿಯಿರುತ್ತದೆ. ನವೆ ಹಾಗೂ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ.
ಮಾರುಕಟ್ಟೆಯಲ್ಲಿ ಬೇರೆ ಬೇರೆ ಬ್ರ್ಯಾಂಡ್ ನ ಹೇರ್ ರಿಮೂವರ್ ಸಿಗುತ್ತದೆ. ಉತ್ತಮ ಬ್ರ್ಯಾಂಡ್ ನ ಕ್ರೀಮ್ ಯಾವುದು ಎಂಬುದನ್ನು ತಿಳಿದುಕೊಂಡು ಅದನ್ನು ಖರೀದಿ ಮಾಡಿ. ಕಡಿಮೆ ಬೆಲೆಯ ಕ್ರೀಂ ಚರ್ಮದ ಮೇಲೆ ಪ್ರಭಾವ ಬೀರುತ್ತದೆ.
ಹೇರ್ ರಿಮೂವರ್ ಕ್ರೀಂನಲ್ಲಿ ಸೂಚಿಸಿರುವ ನಿಯಮಗಳನ್ನು ಪಾಲಿಸಿ. ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಕ್ರೀಂ ಚರ್ಮದ ಮೇಲಿದ್ದರೆ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ.